ಕಾಸರಗೋಡು: ಕೇರಳ ಸ್ಟೇಟ್ ಲೈಬ್ರರಿ ಅಸೋಸಿಯೇಶನ್ ನೇತೃತ್ವದಲ್ಲಿ ಡಿ.22ರಂದು ಮಂಜೇಶ್ವರ ಗಿಳಿವಿಂಡುವಿನಿಂದ ಆರಂಭವಾಗಲಿರುವ ರಾಜ್ಯ ಜನಚೇತನ ಯಾತ್ರೆಯಲ್ಲಿ ನಾಟಕ ಮತ್ತು ಸಂಗೀತ ಶಿಲ್ಪಕಲೆ ಪ್ರದರ್ಶಿಸುವವರ ತರಬೇತಿ ಶಿಬಿರ ಕೊಡಕ್ಕಾಡ್ ಕದಳಿ ವನಂನಲ್ಲಿ ಆರಂಭವಾಗಿದೆ. ಲೈಬ್ರರಿ ಕೌನ್ಸಿಲ್ ಜಿಲ್ಲಾಧ್ಯಕ್ಷ, ಗ್ರಂಥಲೋಕದ ಸಂಪಾದಕ ಪಿವಿಕೆ ಪನಾಯಾಲ್ ಉದ್ಘಾಟಿಸಿದರು. ರವೀಂದ್ರನ್ ಕೊಡಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಕೆ.ಪಿ.ಶ್ರೀಧರನ್ ಮಾಸ್ತರ್ ಮಾತನಾಡಿದರು. ಗ್ರಂಥಾಲಯ ಕೌನ್ಸಿಲ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಕುಮಾರ್ ಸ್ವಾಗತಿಸಿ ವಂದಿಸಿದರು.
ಕಲಾ ತರಬೇತಿ ಶಿಬಿರ ಆರಂಭ
0
ಡಿಸೆಂಬರ್ 10, 2022





