ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಶುದ್ಧಕುಡಿಯುವ ನೀರಿನ ಪೈಪುಗಳ ಬದಲಾವಣೆ ಹಿನ್ನೆಲೆಯಲ್ಲಿ ಡಿ. 5ಹಾಗೂ 6ರಂದು ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿz.É
ಬಾವಿಕ್ಕೆರೆ ಸ್ಥಾವರದಿಂದ ವಿದ್ಯಾನಗರ ಟ್ಯಾಂಕ್‍ಗೆ ಹೋಗುವ ಮುಖ್ಯ ಪೈಪ್‍ಗಳನ್ನು ಚೆರ್ಕಳ ಪೇಟೆ ಹಾಗೂ ಆಸುಪಾಸು ಹೊಸದಾಗಿ ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ನಗರಸಭೆ, ಮಧೂರು ಗ್ರಾಮ ಪಂಚಾಯಿತಿಯ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಈ ದಿನಗಳಲ್ಲಿ ಸ್ಥಗಿತಗೊಳ್ಳಲಿದ್ದು, ಬಳಕೆದಾರರು ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.
ಪೈಪ್‍ಲೈನ್ ಬದಲಾವಣೆ: ಕುಡಿಯುವ ನೀರು ಪೂರೈಕೆ ಸ್ಥಗಿತ
0
ಡಿಸೆಂಬರ್ 03, 2022




