ಕಾಸರಗೋಡು : ಜಿಲ್ಲೆಯ ಸಿಬಿಎಸ್‍ಇ ಶಾಲೆಗಳ ಒಕ್ಕೂಟವಾದ ಚಂದ್ರಗಿರಿ ಸಹೋದಯ ಶಾಲಾ ಕಲಾ ಉತ್ಸವದಲ್ಲಿ ಕೋಳಿಡುಕಂ ಅಪ್ಸರಾ ಪಬ್ಲಿಕ್ ಸ್ಕೂಲ್ 783 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ ಶಿಪ್ ಪಡೆದುಕೊಂಡಿದೆ. ಎಂಪಿ ಇಂಟರ್‍ನ್ಯಾಶನಲ್ ಶಾಲೆ 656 ಅಂಕಗಳೊಂದಿಗೆ ದ್ವಿತೀಯ ಹಾಗೂ ತ್ರಿಕರಿಪುರ ಪೀಸ್ ಪಬ್ಲಿಕ್ ಶಾಲೆ 367 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದೆ.
ಬಂದರು-ಸಂಗ್ರಹಾಲಯ ಇಲಾಖೆ ಸಚಿವ ಅಹ್ಮದ್ ದೇವರಕೋವಿಲಿ ಮುಖ್ಯ ಅತಿಥಿಯಾಗಿದ್ದರು. ಅಪ್ಸರಾ ಶಾಲಾ ಪಿಟಿಎ ಅಧ್ಯಕ್ಷ ಎಂ.ಎ ಹ್ಯಾರಿಸ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲ ಡಾ.ಅನ್ವರ್ ಅಲಿ ಸ್ವಾಗತಿಸಿದರು. ಶಾಲಾ ವ್ಯವಸ್ಥಾಪಕ ಅಬ್ದುಲ್ಲ ಅಹ್ಮದ್, ಖಾಸಿಂ ಇರಿಕ್ಕೂರ್ ಹಾಗೂ ಸಹೋದಯ ಅಧ್ಯಕ್ಷ ಅಬ್ದುಲ್ಲಕುಞÂಉಪಸ್ಥಿತರಿದ್ದರು.
ಜಿಲ್ಲಾ ಸಿಬಿಎಸ್ ಶಾಲಾ ಕಲೋತ್ಸವದಲ್ಲಿ ಕೋಳಿಯಡ್ಕ ಅಪ್ಸರಾ ಶಾಲೆಗೆ ಸಮಗ್ರ ಪ್ರಶಸ್ತಿ
0
ಡಿಸೆಂಬರ್ 03, 2022
Tags





