ಕಾಸರಗೋಡು: ಬೇಕಲದಲ್ಲಿ ಡಿ.24ರಿಂದ ಜ.2ರವರೆಗೆ ಆಯೋಜಿಸಿರುವ ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವಕ್ಕೆ ಸರ್ಕಾರ ಅನುಮತಿ ಮಂಜೂರುಗೊಳಿಸಿದೆ. ಉತ್ಸವಕ್ಕೆ ಅನುಮತಿ ಮಂಜೂರಾತಿ ಆದೇಶದ ಜತೆಗೆ ಬಿಆರ್‍ಡಿಸಿಗೆ 10 ಲಕ್ಷ ರೂ. ಮೊತ್ತವನ್ನೂ ನೀಡಿರುವುದಾಗಿ ಸಂಘಟನಾ ಸಮಿತಿ ಅಧ್ಯಕ್ಷ , ಶಾಸಕ ಸಿ.ಎಚ್.ಕುಞಂಬು ತಿಳಿಸಿದ್ದಾರೆ.
ಬೇಕಲ್ ಬೀಚ್ ಉತ್ಸವವು ಪ್ರವಾಸೋದ್ಯಮ ಸಾಮಥ್ರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕೇರಳದ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಬೇಕಲ ಕರಾವಳಿಯನ್ನು ಮತ್ತಷ್ಟು ಆಕರ್ಷಣೀಯವನ್ನಾಗಿ ಮಾಡಲು ಹತ್ತು ದಿವಸಗಳ ಬೇಕಲ ಬೀಚ್ ಫೆಸ್ಟ್ ಆಯೋಜಿಸಲಾಗಿದೆ. ಡಿಸೆಂಬರ್ 24 ರಂದು ಬೇಕಲದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಕಲಾ ಮತ್ತು ಸಾಂಸ್ಕøತಿಕ ಸಂಜೆ, ಪ್ರಾದೇಶಿಕ ಕಲಾ ಪ್ರದರ್ಶನ ಮತ್ತು ಆಹಾರೋತ್ಸವವನ್ನು ಆಯೋಜಿಸಲಾಗಿದೆ.
ಬೇಕಲ ಬೀಚ್ ಉತ್ಸವಕ್ಕೆ ಸರ್ಕಾರ ಅನುಮತಿ
0
ಡಿಸೆಂಬರ್ 03, 2022
Tags




