HEALTH TIPS

'ಏಕ್ ಭಾರತ್ ಶ್ರೇಷ್ಠ ಭಾರತ್' ಕೇರಳ ಪ್ರಯಾಣ ಆರಂಭಿಸಿದ ಅತುಲ್ಯ ಭಾರತ್ ರೋಲರ್ ಸ್ಕೇಟಿಂಗ್ ತಂಡ

 


           ಕಾಸರಗೋಡು: 'ಏಕ್ ಭಾರತ್ ಶ್ರೇಷ್ಠ ಭಾರತ್'ಎಂಬ ಸಂದೇಶದೊಂದಿಗೆ ಕಾಶ್ಮೀರದ ಲಾಲ್ ಚೌಕ್‍ನಿಂದ ಆರಂಭಗೊಂಡ ಅತುಲ್ಯ ಭಾರತ್ ರೋಲರ್ ಸ್ಕೇಟಿಂಗ್ ತಂಡ ಕಾಸರಗೋಡು ಮೂಲಕ ತಮ್ಮ ಪ್ರಯಾಣ ಮುಂದುವರಿಸಿತು.
         ವಾರಾಣಸಿಯ ದೋಹ್ರಾ ರೋಲರ್ ಸಕೇಟಿಂಗ್ ಸ್ಕೂಲ್ ಆ್ಯಂಡ್ ವಾರಾಣಸಿ ರೋಲರ್ ಸ್ಪೋಟ್ರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯಿತಿ ಕಾಶಿ ಪ್ರಾಂತ್ಯದ ಮಹಿಳಾ ಪ್ರಮುಖಿ ಸೋನಿ ಚೌರಾಸಿಯಾ ಅವರ ನೇತೃತ್ವದ ತಂಡ ಇದಾಗಿದೆ. ಸೆ. 27ರಂದು ಲಾಲ್ ಚೌಕ್‍ನಿಂದ ಸ್ಕೇಟಿಂಗ್ ಯಾನ ಆರಂಭಿಸಿದ ತಂಡ ವಿವಿಧ ರಾಜ್ಯಗಳ ಮೂಲಕ ಹಾದು ಕಾಸರಗೋಡಿಗೆ ಭಾನುವಾರ ರಾತ್ರಿ ತಲುಪಿದೆ.
                 ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಬಂಡೆ ಸನಿಹ ಡಿ. 26ರಂದು ರೋಲರ್ ಸ್ಕೇಟಿಂಗ್ ಯಾನ ಸಮಾರೋಪಗೊಳ್ಳಲಿದೆ. ದೇಶದ 13ರಾಜ್ಯಗಳ ನೂರು ನಗರ ಹಾಗೂ 10ಸಾವಿರ ಗ್ರಾಮಗಳನ್ನು ತಂಡ ಹಾದುಬಂದಿದೆ. ತಂಡದಲ್ಲಿ ಒಂಬತ್ತು ಮಂದಿ ಯುವತಿಯರು ಸೇರಿದಂತೆ 20ಮಂದಿ ಸದಸ್ಯರಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಪ್ರೀತಿ ಹಾಗೂ ಪ್ರೇರಣೆ,  ಯಾತ್ರೆಗೆ ಇನ್ನಷ್ಟು ಉತ್ತೇಜನ ನೀಡಿದೆ. ದೇಶದ ಆಧ್ಯಾತ್ಮಿಕ ಚೈತನ್ಯದ ಪ್ರಚಾರ, ಜನತೆಯಲ್ಲಿನ ರಕ್ತಹೀನತೆ, ಅಪೌಷ್ಠಿಕತೆ, ಪರಿಸರ ಜಾಗೃತಿ,  ಮಹಿಳಾ ಶಿಕ್ಷಣ, ಬಡಜನರ ಹಾಗೂ ಮಹಿಳೆಯರ ಸಶಕ್ತೀಕರಣ ಧ್ಯೇಯದೊಂದಿಗೆ ರೋಲರ್ ಸ್ಕೇಟಿಂಗ್ ಯಾತ್ರೆ ಆಯೋಜಿಸಲಾಗಿದೆ ಎಂದು ತಂಡದ ನಾಯಕಿ ಸೋನಿ ಚೌರಾಸಿಯಾ ತಿಳಿಸುತ್ತಾರೆ.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries