ಎರ್ನಾಕುಳಂ: ಪಾಪ್ಯುಲರ್ ಫ್ರಂಟ್ ಹರತಾಳ ಗಲಭೆ ಪ್ರಕರಣದಲ್ಲಿ ಸಿಎ ರವೂಫ್ ಭಾಗಿಯಾಗಿರುವುದನ್ನು ಸರ್ಕಾರ ಮತ್ತೆ ಮರೆಮಾಚಿದೆ.
ಪಿಎಫ್‍ಐ ರಾಜ್ಯ ಕಾರ್ಯದರ್ಶಿ ಸಿಎ ರವೂಫ್ ಅವರನ್ನು ಪ್ರಕರಣದಿಂದ ಕೈತಪ್ಪಿಸುವ ಯತ್ಮ ಮುಂದುವರಿದಿದೆ. ಜಪ್ತಿ ಆದೇಶದಲ್ಲಿ ಅಬ್ದುಲ್ ಸತ್ತಾರ್ ಅವರ ಜಮೀನು ಆಸ್ತಿ ಮಾಹಿತಿಯನ್ನು ಮಾತ್ರ ಸೇರಿಸಲಾಗಿದೆ. ರವೂಫ್ ಅವರನ್ನು ಪ್ರಮುಖ ಪ್ರಕರಣದಿಂದ ಹೊರಗಿಡುವ ಪ್ರಯತ್ನಗಳ ಹಿಂದೆ ಸಿಪಿಎಂ ಗಣ್ಯರ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಪಾಪ್ಯುಲರ್ ಫ್ರಂಟ್ ಹರತಾಳ ಗಲಭೆಯಲ್ಲಿ ರಾಜ್ಯಾದ್ಯಂತ 5 ಕೋಟಿ 20 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಹಣ ನಾಶವಾಗಿದೆ. ಈ ನಷ್ಟವನ್ನು ಹರತಾಳಕ್ಕೆ ಕರೆ ನೀಡಿದ ನಿಷೇಧಿತ ಭಯೋತ್ಪಾದಕ ಸಂಘಟನೆ ಮತ್ತು ಅದರ ಮುಖಂಡರ ಕೈಯಿಂದ ವಸೂಲಿ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ ಸರ್ಕಾರವು ನ್ಯಾಯಾಲಯ ನೀಡಿದ್ದ ಗಡುವು ಅನುಸರಿಸಲು ವಿಫಲವಾಗಿದೆ ಮತ್ತು ಸಿಪಿಎಂ-ಪಾಪ್ಯುಲರ್ ಫ್ರಂಟ್ ಮತ ದಂಧೆಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಕಾರ್ಯದರ್ಶಿ ಸಿಎ ರವೂಫ್ ಅವರನ್ನು ಹರತಾಳ ಪ್ರಕರಣಗಳಿಂದ ವಿನಾಯಿತಿ ನೀಡಿದೆ.
ಪಿಎಫ್‍ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಮತ್ತು ಕಾರ್ಯದರ್ಶಿ ಸಿಎ ರವೂಫ್ ಪತ್ರಿಕಾಗೋಷ್ಠಿಯಲ್ಲಿ ಹರತಾಳಕ್ಕೆ ಕರೆ ನೀಡಿದ್ದರು. ಆದರೆ, ರವೂಫ್ ಅವರನ್ನು ಹೊರಗಿಟ್ಟರೂ ರವೂಫ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಅಬ್ದುಲ್ ಸತ್ತಾರ್ ಹಾಗೂ ಪಿಎಫ್ ಐ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಅಬ್ದುಲ್ ಸತ್ತಾರ್ ಹಾಗೂ ಪಿಎಫ್ ಐಗೆ ಸೇರಿದ ಜಮೀನು ಆಸ್ತಿ ಮಾಹಿತಿಯನ್ನು ಸರ್ಕಾರ ನೋಂದಣಿ ಇಲಾಖೆಗೆ ಹಸ್ತಾಂತರಿಸಿದೆ. ಜಮೀನು ಆಸ್ತಿ ಮಾಹಿತಿಯನ್ನು ಪರಿಶೀಲಿಸಿದ ನಂತರ ಜಪ್ತಿ ಪ್ರಾರಂಭವಾಗುತ್ತದೆ. ಆದರೆ ಪಿಎಫ್‍ಐನ ಹೆಚ್ಚಿನ ಆಸ್ತಿಗಳು ಕೆಲವು ದತ್ತಿ ಸಂಸ್ಥೆಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಧಾರ್ಮಿಕ ಭಯೋತ್ಪಾದಕ ಸಂಘಟನೆಯನ್ನು ನಿμÉೀಧಿಸುವ ಸಾಧ್ಯತೆಯ ನಿರೀಕ್ಷೆಯಲ್ಲಿ ಮುಖ್ಯ ಕಚೇರಿಗಳನ್ನು ಚಾರಿಟಬಲ್ ಟ್ರಸ್ಟ್‍ಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಪಿಎಫ್‍ಐ ನಿμÉೀಧದ ನಂತರ ಅವರ ಖಾತೆಗಳನ್ನು ಎನ್‍ಐಎ ಸ್ಥಗಿತಗೊಳಿಸಿತ್ತು.
ಹರತಾಳ ಹಿಂಸಾಚಾರ; ಸಿಎ ರೌಫ್ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಸರ್ಕಾರ ಮೀನ-ಮೇಷ: ಅಬ್ದುಲ್ ಸತ್ತಾರ್ ಮತ್ತು ಇತರರ ಆಸ್ತಿಗಳ ಮೇಲೆ ಮಾತ್ರ ಕ್ರಮ
0
ಡಿಸೆಂಬರ್ 27, 2022





