HEALTH TIPS

ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ 12 ಮಾಧ್ಯಮ ಕಾರ್ಯಕರ್ತರು ಎನ್ಐಎ ಕಣ್ಗಾವಲಿನಲ್ಲಿ


                 ತಿರುವನಂತಪುರ: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ 12 ಮಾಧ್ಯಮ ಕಾರ್ಯಕರ್ತರು ಎನ್‍ಐಎ ಕಣ್ಗಾವಲಿನಲ್ಲಿದ್ದಾರೆ.
     ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರು ಮಲಯಾಳಿ ಮಾಧ್ಯಮ ಕಾರ್ಯಕರ್ತರನ್ನು ವಿಚಾರಣೆಗಾಗಿ ಕೊಚ್ಚಿಯಲ್ಲಿರುವ ಎನ್‍ಐಎ ಪ್ರಧಾನ ಕಚೇರಿಗೆ ಕರೆಸಲಾಯಿತು. ಅವರು ತಿಂಗಳುಗಳ ಕಾಲ ಎನ್ಐಎ ಕಣ್ಗಾವಲಿನಲ್ಲಿದ್ದರು. ತನಿಖಾ ಸಂಸ್ಥೆಯು ಅವರ ಫೆÇೀನ್‍ಗಳಿಂದ ಇದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಪಡೆದುಕೊಂಡಿದೆ. ಮೊದಲ ಹಂತದಲ್ಲಿ ಆರು ಜನರ ಪ್ರಾಥಮಿಕ ವಿಚಾರಣೆ ಪೂರ್ಣಗೊಂಡಿದೆ. ನೋಟಿಸ್ ನೀಡಿದ ಬಳಿಕ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಎನ್‍ಐಎ ಮೂಲಗಳು ತಿಳಿಸಿವೆ.
              ವಿಚಾರಣೆಗೆ ಹಾಜರಾದ ಕೆಲವು ಮಾಧ್ಯಮ ಕಾರ್ಯಕರ್ತರು ತಮ್ಮ ಸಂಸ್ಥೆಯ ಗುರುತಿನ ಚೀಟಿ ಧರಿಸಿ ಬಂದಿದ್ದರು ಎಂದು ಎನ್‍ಐಎ ಅಧಿಕಾರಿಗಳು ತಿಳಿಸಿದ್ದಾರೆ. ಟೆಲಿಗ್ರಾಂ ಮೂಲಕ ಐಸಿಸ್‍ಗೆ ಸೇರ್ಪಡೆಗೊಂಡ ಭಯೋತ್ಪಾದಕರೊಂದಿಗೂ ಸಂಪರ್ಕದಲ್ಲಿದ್ದರು. ಕೇರಳದಲ್ಲಿ ಐಎಸ್‍ನ ಸ್ಲೀಪರ್ ಸೆಲ್‍ಗಳನ್ನು ನಿಯಂತ್ರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎನ್‍ಐಎ ಪತ್ತೆ ಮಾಡಿದೆ. ಇದಾದ ಬಳಿಕ ಆರು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
                  ಮೊದಮೊದಲು ತನಿಖಾ ತಂಡಕ್ಕೆ ಸಹಕರಿಸದಿದ್ದರೂ ಒಂದೊಂದಾಗಿ ಸಾಕ್ಷ್ಯ ತೋರಿಸಿದಾಗ ಸುಮ್ಮನಾದರು. ಅವರು ಅನೇಕ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳನ್ನು ನೀಡಲು ಸಾಧ್ಯವಾಗಲಿಲ್ಲ. ವೀಕ್ಷಣೆಯಲ್ಲಿರುವ ಎಲ್ಲಾ 12 ಮಾಧ್ಯಮ ಕಾರ್ಯಕರ್ತರು ಈ ಆರು ಜನರಿಗೆ ಸಂಬಂಧಿಸಿದಂತೆ ಒಂದೇ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ.
           ಇದಲ್ಲದೇ ಕೆಲವು  ಪೆÇಲೀಸರಿಂದ ಎನ್‍ಐಎ ಮಾಹಿತಿ ಪಡೆಯುತ್ತಿದೆ. ಕೆಲವರು ಉಗ್ರರೊಂದಿಗೆ ನೇರ ಸಂಪರ್ಕದಲ್ಲಿರುವರೆಂದು ತಿಳಿದುಬಂದಿದೆ. ಹೈದ್ರಾಬಾದಿನಿಂದ ಆಗಮಿಸಿರುವ ಎನ.ಐ.ಎ. ಕೊಚ್ಚಿಯಲ್ಲಿ ಬೀಡುಬಿಟ್ಟಿದೆ.

               ಎಫ್‍ಐ ಸೇರಿದಂತೆ ಕೆಲವು ಸಂಸ್ಥೆಗಳ ಪಾವತಿಗೆ ಸಂಬಂಧಿಸಿದಂತೆ ಸಿಎಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ. ಕೆಲ ಮುಖಂಡರ ಸಂಪರ್ಕದಲ್ಲಿದ್ದ ಪೆÇಲೀಸರನ್ನೂ ವಿಚಾರಣೆಗೆ ಒಳಪಡಿಸಲಾಗುವುದು.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries