HEALTH TIPS

'ಶ್ರೀನಗರದಲ್ಲಿ ಜಿ20 ಆಯೋಜನೆ ಸಾಧ್ಯತೆ'

 

             ಶ್ರೀನಗರ : 'ಇದೇ ಮೇ ತಿಂಗಳ ಮಧ್ಯದಲ್ಲಿ ಶ್ರೀನಗರದಲ್ಲಿ ಜಿ20 ಕಾರ್ಯಕ್ರಮಗಳನನ್ನು ಆಯೋಜಿಸುವ ಸಾಧ್ಯತೆ ಇರುವುದರಿಂದ, ಜಮ್ಮು ಮತ್ತು ಕಾಶ್ಮೀರದ ಆಡಳಿತವು ಸಿದ್ಧತೆಗಳನ್ನು ಮಾಡುತ್ತಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

             'ಭಾರತವು ಜಿ20ರ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ, ಮೇ ತಿಂಗಳ ಮಧ್ಯದಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಆದರೆ, ದಿನಾಂಕಗಳನ್ನು ಇನ್ನೂ ನಿಗದಿಪಡಿಸಿಲ್ಲ' ಎಂದು ಕಾಶ್ಮೀರದ ವಿಭಾಗೀಯ ಆಯುಕ್ತ ಪಾಂಡುರಂಗ ಪೋಲೆ ಅವರು ಹೇಳಿದರು.

          'ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಆಡಳಿತವು ಬಹಳ ದೂರ ಸಾಗಿದೆ. ಅದೇ ಸಮಯದಲ್ಲಿ ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಅನುಮಾನಗಳನ್ನು ನಿವಾರಿಸುತ್ತದೆ. ಪ್ರಸ್ತುತದಲ್ಲಿ ಎಲ್ಲಾ ಪ್ರಮುಖ ರಸ್ತೆಗಳು ಮತ್ತು ಪ್ರದೇಶಗಳನ್ನು ದುರಸ್ತಿ ಮಾಡಲಾಗುತ್ತಿದೆ. ಕಾರ್ಯಕ್ರಮಗಳು ನಡೆಯುವ ವೇಳೆಗೆ ನಾವು ಸಿದ್ಧರಾಗಿರುತ್ತೇವೆ' ಎಂದು ಅವರು ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries