ಕಾಸರಗೋಡು: ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ಮಂಡಳಿ ಕಾಸರಗೋಡು ಕಛೇರಿಯಿಂದ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಅಕ್ಷಯ ಕೇಂದ್ರದ ಮೂಲಕ ಮಸ್ಟರಿಂಗ್ ನಡೆಸುವಂತೆ ಸೂಚಿಸಲಾಗಿದೆ. ಮಸ್ಟರಿಂಗ್ ನಡೆಸಲು ಸಾಧ್ಯವಾಗದ ಫಲಾನುಭವಿಗಳು ನೇರವಾಗಿ ಕಛೇರಿಗೆ ತಲಪಿ ಜೀವಿತ ಪ್ರಮಾಣ ಪತ್ರ ಹಾಜರುಪಡಿಸಬೇಕಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467 2205380)ಸಂಪರ್ಕಿಸುವಂತೆ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆ ತಿಳಿಸಿದೆ.
ಕಾರ್ಮಿಕರ ಕಲ್ಯಾಣ ಮಂಡಳಿ-ಮಸ್ಟರಿಂಗ್ ನಡೆಸಲು ಸೂಚನೆ
0
ಜನವರಿ 09, 2023
Tags




