HEALTH TIPS

ರಾಷ್ಟ್ರವಿರೋಧಿ ಸಂಘಟನೆಗಳೊಂದಿಗೆ ಸಂಪರ್ಕ: ಆರು ಮಾಧ್ಯಮ ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸಿದ ಎನ್.ಐ.ಎ


           ಕೊಚ್ಚಿ: ಕೇರಳದ ಪ್ರಮುಖ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಆರು ಮಂದಿ ಮಾಧ್ಯಮ ಕಾರ್ಯಕರ್ತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಿಚಾರಣೆಗೆ ಒಳಪಡಿಸಿದೆ.
            ಅವರು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪತ್ತೆಯಾದ ಹಿನ್ನೆಲೆಯಲ್ಲಿ  ವಿವರವಾದ ವಿಚಾರಣೆ ನಡೆಸಲಾಯಿತು. ಆರು ಮಂದಿಯನ್ನು ಕೊಚ್ಚಿಯಲ್ಲಿರುವ ಎನ್‍ಐಎ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಎನ್‍ಐಎಯ ರಹಸ್ಯ ತನಿಖೆಯಲ್ಲಿ ದೇಶವಿರೋಧಿ ಸಂಘಟನೆಗಳೊಂದಿಗೆ ಇವರ ಒಡನಾಟದ ಬಗ್ಗೆ ಮಾಹಿತಿ ಸಿಕ್ಕಿದೆ. ಇದನ್ನು ದೃಢಪಡಿಸುವ ದಾಖಲೆಗಳನ್ನು ಅವರ ಪೋನ್‍ಗಳಿಂದ ಸ್ವೀಕರಿಸಲಾಗಿದೆ ಎಂದು ವರದಿಯಾಗಿದೆ.
            ಕೇರಳದ ಕೆಲವು ಮಾಧ್ಯಮ ಕಾರ್ಯಕರ್ತರ ಮೇಲೆ ಎನ್‍ಐಎ ನಿಗಾ ಇರಿಸಿತ್ತು. ಭಯೋತ್ಪಾದಕ ಸಂಘಟನೆಗಳು ಮತ್ತು ಮಾವೋವಾದಿಗಳೊಂದಿಗೆ ಅವರ ಸಂಪರ್ಕದ ಬಗ್ಗೆ ಎನ್.ಐ.ಎಗೆ ಮಾಹಿತಿ ಸಿಕ್ಕಿತ್ತು. ಇದನ್ನು ಆಧರಿಸಿ ಎನ್ ಐಎ ಅಂತಹವರ ಪಟ್ಟಿಯನ್ನು ಸಿದ್ಧಪಡಿಸಿ ತನಿಖೆ ನಡೆಸಿತ್ತು. ಇದರ ಭಾಗವಾಗಿಯೇ ಕಳೆದ ಕೆಲವು ದಿನಗಳಿಂದ  ಈ ವಿಚಾರಣೆ ನಡೆದಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸಲಿದ್ದು, ಅವರ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿರುವುದರಿಂದ ಬಂಧನ ಸೇರಿದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.
          ವಿವಿಧ ಕೇಂದ್ರೀಯ ಏಜೆನ್ಸಿಗಳು 2018 ರಿಂದ ಮಲಯಾಳ ಮಾಧ್ಯಮ ಕಾರ್ಯಕರ್ತರ ಚಲನವಲನಗಳ ಮೇಲೆ ನಿಗಾ ಇಡುತ್ತಿವೆ. ಇವರಲ್ಲಿ ಕೆಲವರು ಕಾಸರಗೋಡಿನಿಂದ ಸಿರಿಯಾಕ್ಕೆ ಬಂದು ಭಯೋತ್ಪಾದಕ ಸಂಘಟನೆ ಐಸಿಸ್ ಸೇರಿದ್ದ ಅಬ್ದುಲ್ಲಾ ರಶೀದ್ ಜತೆ ನಂಟು ಹೊಂದಿರುವುದು ಕಂಡುಬಂದಿದೆ. ತನಿಖೆಯ ಸಂದರ್ಭದಲ್ಲಿ, ಐಎಸ್ ನೇಮಕಾತಿಯ ಭಾಗವಾಗಿ ರಶೀದ್ ಕಳುಹಿಸಿರುವ ಹಲವಾರು ಟೆಲಿಗ್ರಾಮ್ ಸಂದೇಶಗಳಲ್ಲಿ ಕೆಲವು ಮಾಧ್ಯಮದ ವ್ಯಕ್ತಿಗಳ ಹೆಸರಿದೆ ಎಂದು ಎನ್.ಐ.ಎ. ಪತ್ತೆ ಮಾಡಿದೆ. ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಅನ್ನು ನಿಷೇಧಿಸಿದ ಬಳಿಕ ಮುಂದಿನ ಕ್ರಮಗಳನ್ನು ಬಿಗಿಗೊಳಿಸುವ ಭಾಗವಾಗಿ ಎನ್‍ಐಎ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಪತ್ರಕರ್ತರತ್ತ ಬಂದು ತಲುಪಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries