ಪೆರ್ಲ: ಮಣಿಯಂಪಾರೆಯಲ್ಲಿರುವ ಸಂತ ಲಾರೆನ್ಸ್ ಚರ್ಚಿನ ನವೀಕೃತ ಕಾಮಗಾರಿಯ ಬಳಿಕ ಉದ್ಘಾಟನೆಯನ್ನು ಭಾನುವಾರ ಬೆಳಿಗ್ಗೆ ನೇರೆವೇರಿಸಲಾಯಿತು.
ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಡಾ.ಅಲೋಶಿಯಸ್ ಪಾವ್ಲು ಡಿ.ಸೋಜ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಳಿಕ ದಿವ್ಯ ಬಲಿ ಪೂಜೆ ಹಾಗೂ 29 ಮಕ್ಕಳ ದೃಢೀಕರಣ ಕಾರ್ಯಕ್ರಮ ಜರಗಿತು. ಮಣಿಯಂಪಾರೆ ಚರ್ಚಿನ ಧರ್ಮಗುರು ನೇಲ್ಸನ್ ಡಿ.ಆಲ್ಮೇಡಾ ಹಾಗೂ ಫಾಧರ್ ಜೊಸ್ವಿನ್ ಸಹಕರಿಸಿದರು. ಚರ್ಚಿನ ಪಾಲನ ಸಮಿತಿ ಉಪಾಧ್ಯಕ್ಷ ಮೆಲ್ಟನ್ ಫೀಟರ್ ಡಿ.ಸೋಜ ಹಾಗೂ ಸಮಿತಿ ಸದಸ್ಯರು, ವಾಳೆಯ ಗುರಿಕಾರರು,ಧರ್ಮ ಭಗಿನಿಯರು ಉಪಸ್ಥಿತರಿದ್ದರು.

.jpg)
.jpg)
