ಕೊಟ್ಟಾಯಂ: ಕೊಟ್ಟಾಯಂನಲ್ಲಿ ಆಹಾರ ವಿಷಬಾಧೆಗೊಳಗಾಗಿ ನರ್ಸ್ ರಶ್ಮಿ ರಾಜ್ ಮೃತರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಪ್ಪುರಂ ಕುಝಿಮಂಡಿ ಹೋಟೆಲ್ ಮಾಲೀಕ ಲತೀಫ್ ನನ್ನು ಬಂಧಿಸಿದ ಬೆನ್ನಲ್ಲೇ, ಹೋಟೆಲ್‍ನ ಮುಖ್ಯ ಅಡುಗೆಯವನನ್ನೂ ಬಂಧಿಸಲಾಗಿದೆ.
ಮುಖ್ಯ ಅಡುಗೆಯವನಾಗಿರುವ ಮಲಪ್ಪುರಂ ಮೂಲದ ಮುಹಮ್ಮದ್ ಸಿರಾಜುದ್ದೀನ್ ನನ್ನು ಮಲಪ್ಪುರಂನಲ್ಲಿ ಬಂಧಿಸಲಾಗಿದೆ. ಸಿರಾಜುದ್ದೀನ್‍ನನ್ನು ಮಲಪ್ಪುರಂ ಜಿಲ್ಲೆಯ ಕಡಂಬುಜಾದಲ್ಲಿ ಬಂಧಿಸಲಾಗಿದೆ. ಫುಡ್ ಪಾಯ್ಸನಿಂಗ್ ನಿಂದ ರಶ್ಮಿ ಸಾವಿಗೆ ಶರಣಾದ ಕಾರಣ ಪೋಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ಪೋಲೀಸರು ಮಲಪ್ಪುರಂ ಕುಝಿಮಂಡಿ ಎಂಬ ಹೋಟೆಲ್ ಮಾಲೀಕನನ್ನು ಬಂಧಿಸಿದ್ದರು. ಕಾಸರಗೋಡು ನಿವಾಸಿ ಐ.ಎ. ಲತೀಫ್ ಬಂಧಿತ ಮಾಲಕ. ಆಲ್ಫಾಮ್ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ನರ್ಸ್ ರಶ್ಮಿ ರಾಜ್ (33) ಜನವರಿ 2 ರಂದು ಮೃತಪಟ್ಟಿದ್ದರು.
ಆರ್ಡರ್ ಮಾಡಿದ ಆಲ್ಫಾಮ್ ಅನ್ನು ಸೇವಿಸಿದ ನಂತರ ರಶ್ಮಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು. ರಶ್ಮಿ ಸಾವಿನ ನಂತರ ವಿಷಾಹಾರ ಸೇವನೆಯಿಂದ ಬಳಲುತ್ತಿದ್ದ ಇತರ ಎಂಟು ಮಂದಿ ಕೊಟ್ಟಾಯಂ ಪೋಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದು, ಕಾಸರಗೋಡು ನಿವಾಸಿ ಲತೀಫ್ ಎಂಬಾತನನ್ನು ಪೋಲೀಸರು ಈಗಾಗಲೇ ಬಂಧಿಸಿದ್ದಾರೆ.
ಕೊಟ್ಟಾಯಂನಲ್ಲಿ ಆಹಾರ ವಿಷಬಾಧೆಗೊಳಗಾಗಿ ಮೃತ ಘಟನೆ: ಹೋಟೆಲ್‍ನ ಮುಖ್ಯ ಅಡುಗೆಯಾಳು ಮೊಹಮ್ಮದ್ ಸಿರಾಜುದ್ದೀನ್ ಬಂಧನ
0
ಜನವರಿ 09, 2023





