HEALTH TIPS

ಶಾಲೆಯ ಮಧ್ಯಾಹ್ನ ಊಟದ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆ: ಫೆಬ್ರವರಿ 15- 17ರಂದು ಕಾಸರಗೋಡು ಉಪಜಿಲ್ಲಾ ಸಾರ್ವಜನಿಕ ವಿಚಾರಣೆ


              ಕಾಸರಗೋಡು:    ಕೇಂದ್ರ ಸರಕಾರದ ಸಲಹೆಯಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶಾಲಾ ಮಧ್ಯಾಹ್ನದ ಊಟದ ಯೋಜನೆ (ಪಿಎಂ ಪೋಷನ್) ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸುವ ಕ್ರಮಗಳನ್ನು 'ಕಿಲಾ' ದ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಕಿಲಾದಿಂದ ನೇಮಕಗೊಂಡ ಸಾಮಾಜಿಕ ಲೆಕ್ಕಪರಿಶೋಧನಾ ಫೆಸಿಲಿಟೇಟರ್‍ಗಳು ನೂನ್ ಮಿಲ್ ಅಧಿಕಾರಿಯ ಸಹಾಯದಿಂದ ಆಡಿಟ್ ನಡೆಸುತ್ತಾರೆ. ಕಾಸರಗೋಡು ಉಪಜಿಲ್ಲೆಯ ಕ್ಲಸ್ಟರ್ 1 ರಲ್ಲಿ ಜಿ ಜೆ ಬಿ ಎಸ್ ಮಧೂರು, ಜಿ ಎಲ್ ಪಿ ಎಸ್ ಅದ್ರುಕುಳಿ, ಜಿ ಯು ಪಿ ಎಸ್ ಕೋಳಿಯಡ್ಕ, ಸಿ ಎಚ್ ಎಸ್ ಎಸ್ ಚಟ್ಟಂಚಾಲ್, ಎ ಯು ಪಿ ಎಸ್ ಮಡೋನಾ ಎಂಬೀ ಶಾಲೆಗಳ ಸಾರ್ವಜನಿಕ ಅಹವಾಲು ಫೆಬ್ರವರಿ 15ರಂದು ಬೆಳಗ್ಗೆ 10.30ಕ್ಕೆ ಎ ಯು ಪಿ ಎಸ್ ಮಡೋನದಲ್ಲಿ ಕಾಸರಗೋಡು ನಗರಸಭೆ ಅಧ್ಯಕ್ಷ ವಿ. ಎಂ. ಮುನೀರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
               ಕ್ಲಸ್ಟರ್ ಎರಡರಲ್ಲಿರುವ ಶಾಲೆಗಳಾದ ಜಿ ಯು ಪಿ ಎಸ್ ಮಾಣಡ್ಕ , ಜಿ ಎಲ್ ಪಿ ಎಸ್ ತರಂತಟ್ಟಡ್ಕ, ಎ ಯು ಪಿ ಎಸ್ ಮುನ್ನಾಡ್, ಜಿ ಎಲ್ ಪಿ ಎಸ್ ಬೇಡಡ್ಕ ನ್ಯೂ, ಜಿ ವಿ ಎಚ್ ಎಸ್ ಎಸ್ ಇರಿಯಣ್ಣಿ ಎಂಬೀ ಶಾಲೆಗಳ ಸಾರ್ವಜನಿಕ ಅಹವಾಲು ಫೆಬ್ರವರಿ 17ರಂದು ಬೆಳಗ್ಗೆ 11 ಗಂಟೆಗೆ ಎ. ಯು. ಪಿ. ಎಸ್ ಮುನ್ನಾಡ್ ನಲ್ಲಿ ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಾರ್ವಜನಿಕ ವಿಚಾರಣೆಯಲ್ಲಿ ಜನ ಪ್ರತಿನಿಧಿಗಳು, ಪಿಟಿಎ ಅಧಿಕಾರಿಗಳು, ಪೋಷಕರು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ. ಕಿಲಾ ಜಿಲ್ಲಾ ಸಂಚಾಲಕರು ಮತ್ತು ಸಾಮಾಜಿಕ ಲೆಕ್ಕ ಪರಿಶೋಧನಾ ಸಂಚಾಲಕರು ಭಾಗವಹಿಸುತ್ತಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries