ಪೆರ್ಲ: ಮಲಬಾರ್ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ಮಂಜೇಶ್ವರ ತಾಲೂಕು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕವಲ್ಲದ ಟ್ರಸ್ಟಿಗಳ ಹುದ್ದೆಗಳಿಗೆ ಹಿಂದೂ ಧರ್ಮಕ್ಕೂಳಪಟ್ಟವರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು ವಿಭಾಗ ನೀಲೇಶ್ವರದಲ್ಲಿರುವ ಅಸಿಸ್ಟೆಂಟ್ ಕಮಿಷನ್ ರ ಕಛೇರಿಗೆ ಫೆಬ್ರವರಿ 15 ಸಂಜೆ 5 ಗಂಟೆಯ ಮೊದಲು ನೀಡಬೇಕು. ಅರ್ಜಿ ನಮೂನೆಯನ್ನು ಮಲಬಾರ್ ದೇವಸ್ವಂ ಬೋರ್ಡ್ ವೆಬ್‍ಸೈಟ್ ನಿಂದ ಅಥವಾ ನೀಲೇಶ್ವರದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಿಂದ ಎಲ್ಲಾ ಕರ್ತವ್ಯದ ದಿನಗಳಲ್ಲಿ ಉಚಿತವಾಗಿ ಪಡೆಯಬಹುದು. ನಿಗದಿತ ದಿನಾಂಕದ ನಂತರ ನೀಡಿದ ಅರ್ಜಿಯನ್ನು ಯಾವುದೇ ಸಂದರ್ಭದಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ಮಲಬಾರ್ ದೇವಸ್ವಂ ಬೋರ್ಡ್ ಸಹಾಯಕ ಆಯುಕ್ತರು ತಿಳಿಸಿದ್ದಾರೆ.
ಕಾಟುಕುಕ್ಕೆ ದೇವಾಲಯದ ಸಾಂಪ್ರದಾಯಿಕವಲ್ಲದ ಟ್ರಸ್ಟಿಗಳ ಖಾಲಿ ಹುದ್ದೆಗೆ ನೇಮಕಕ್ಕೆ ಅರ್ಜಿ ಆಹ್ವಾನ
0
ಫೆಬ್ರವರಿ 05, 2023




