ಪೆರ್ಲ: ಎಣ್ಮಕಜೆ ಪಂಚಾಯಿತಿಯ ಬಣ್ಪುತ್ತಡ್ಕ ಸನಿಹದ ಶೇಣಿ ಮಙËರೆ ಎಂಬಲ್ಲಿ ಮನೆಯೊಳಗೆ ಮಹಿಳೆ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆಂಟೋ ಸೆಬಾಸ್ಟಿಯನ್ ನೀತುಕೃಷ್ಣಳನ್ನು ಜ. 27ರಂದು ಕೊಲೆಗೈದು, 29ರ ವರೆಗೂ ಅದೇ ಮನೆಯಲ್ಲಿ ಶವದೊಂದಿಗೆ ಕಾಲ ಕಳೆದಿದ್ದ ಎಂಬ ವಿಷಯ ತನಿಖೆಯಿಂದ ಬಹಿರಂಗಗೊಂಡಿದೆ.
ಬಟ್ಟೆಯಿಂದ ಕತ್ತು ಬಿಗಿದು ಕೊಲೆಗೈದ ನಂತರ, ಮೃತದೇಹವನ್ನು ಬಟ್ಟೆಯಿಂದ ಮುಚ್ಚಿಟ್ಟು, ಮೃತದೇಹದ ಮೇಲಿದ್ದ ಚಿನ್ನಾಭರಣ ತೆಗೆದು, ಜ. 29ರಂದು ಮನೆಯಿಂದ ಪರಾರಿಯಾಗಿದ್ದಾನೆ. ನೀತುಕೃಷ್ಣಳ ಮೊಬೈಲನ್ನು ಸ್ವಿಚ್‍ಆಫ್ ಮಾಡಿ ಜತೆಗೆ ಕೊಂಡೊಯ್ದಿದ್ದಾನೆ. ಚಿನ್ನವನ್ನು ಪೆರ್ಲದ ಚಿನ್ನದಂಗಡಿಯೊಂದಕ್ಕೆ ಮಾರಾಟ ಮಾಡಿ, ಅದರಿಂದ ಲಭಿಸಿದ ಹಣದೊಂದಿಗೆ ಕೋಯಿಕ್ಕೋಡ್ ತಲುಪಿದ್ದಾನೆ. ಅಲ್ಲಿ ಸಿನಿಮಾ ವೀಕ್ಷಿಸಿ, ಮದ್ಯಪಾನ ಮಾಡಿ ಮರುದಿನ ಎರ್ನಾಕುಳಂಗೆ ತಲುಪಿದ್ದಾನೆ. ಈ ಮಧ್ಯೆ ನೀತುಕೃಷ್ಣಳ ಮೊಬೈಲ್ ಆನ್ ಮಾಡಿ, ಅದರಲ್ಲಿ ಬಂದಿರುವ ವಾಟ್ಸಪ್ ಸಂದೇಶಗಳನ್ನು ವೀಕ್ಷಿಸುತ್ತಿದ್ದನು. ಈ ಮೊಬೈಲ್ ಮೇಲೆ ಸೈಬರ್‍ಸೆಲ್ ಅಧಿಖಾರಿಗಳು ನಿರಂತರ ನಿಗಾಯಿರಿಸುತ್ತಿದ್ದ ಹಿನ್ನೆಲೆಯಲ್ಲಿ ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಮರುದಿನ ತಿರುವನಂತಪುರದಲ್ಲಿ ಈತನನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿದೆ. ತಿರುವನಂತಪುರದಿಂದ ಮುಂಬೈಗೆ ತೆರಳಲು ಬಸ್ ಟಿಕೆಟ್ ಕಾಯ್ದಿರಿಸಿದ್ದು, ಈ ಮಧ್ಯೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಆಂಟೋಸೆಬಾಸ್ಟಿಯನ್ ವಿರುದ್ಧ ಹಲವು ಕೇಸುಗಳು ದಾಖಲಾಗಿದೆ. ಪತ್ನಿ, ಮಕ್ಕಳನ್ನು ಹೊಂದಿದ್ದು, ನಿರಂತರ ಕಿರುಕುಳದಿಂದ ರೋಸಿಹೋಗಿ ಈತನ ಪತ್ನಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಳು. ನಂತರ ವಿವಾಹಿತೆ ಹಾಗೂ ಆಕೆಯ ಮಕ್ಕಳೊಂದಿಗೆ ವಾಸ್ತವ್ಯ ಆರಂಭಿಸಿದ್ದು, ಅಲ್ಲೂ ಕಿರುಕುಳ ನೀಡಿರುವ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ನಂತರ ನೀತುಕೃಷ್ಣಳ ಜತೆ ವಾಸ್ತವ್ಯ ಆರಂಭಿಸಿದ್ದಾನೆ.
ಮಹಿಳೆ ನಿಗೂಢ ಸಾವು: ಎರಡು ದಿನ ಮೃತದೇಹವಿದ್ದ ಮನೆಯಲ್ಲಿ ತಂಗಿದ್ದ ಆರೋಪಿ
0
ಫೆಬ್ರವರಿ 05, 2023




