ಮಂಜೇಶ್ವರ: ಪಾವೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಶ್ರೀ ಚಾಮುಂಡೇಶ್ವರಿ ಸೇವಾ ಸಂಘ ಕೊಪ್ಪಳ ಪಾವೂರು ಇವರು ಶುದ್ಧ ತಂಪಾದ ಕುಡಿಯುವ ಶೀತಲೀಕರಣ ಯಂತ್ರವನ್ನು ಕೊಡುಗೆಯಾಗಿ ನೀಡಿದರು.
ಪಾವೂರು ಗುತ್ತು ಶ್ರೀಧರ ಶೆಟ್ಟಿಯವರು ಸಾಂಕೇತಿಕವಾಗಿ ಉದ್ಘಾಟಿಸಿದರು. ಮಳಿಗುತ್ತು ವಿಶ್ವಂಬರ ನಾಯ್ಕ್, ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷ ಶಿವರಾಮ ಶೆಟ್ಟಿ ಮುಗೇರ್ ಗುತ್ತು, ಮಾಜಿ ಅಧ್ಯಕ್ಷ ಚಂದ್ರಹಾಸ ಪೂಜಾರಿ ಮುಡಿಮಾರು, ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಕೊಪ್ಪಳ, ಕ್ಷೇತ್ರ ಆಡಳಿತ ಸಮಿತಿ ವಿನೋದ್ ಕುಮಾರ್ ರೆಂಜೆಪಡ್ಪು, ಭಜನಾ ಮಂಡಳಿಯ ಶಿವರಾಮ ಬಳ್ಳೂರು, ಹರಿನಾಥ್ ಶೆಟ್ಟಿ ಕೊಪ್ಪಳ ಹಾಗೂ ಮೋನಪ್ಪ ಶೆಟ್ಟಿ ಮುಟ್ಲ ಮುಂತಾದವರು ಉಪಸ್ಥಿತರಿದ್ದರು. ಕ್ಷೇತ್ರಾಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ರವಿ ಮುಡಿಮಾರು ಸ್ವಾಗತಿಸಿ, ವಂದಿಸಿದರು.
ಕುಡಿಯುವ ನೀರಿನ ಶೀತಲೀಕರಣ ಯಂತ್ರ ಕೊಡುಗೆ
0
ಫೆಬ್ರವರಿ 03, 2023
Tags




.jpg)
