ಕಾಸರಗೋಡು : ಭಾರತದಲ್ಲಿ ಅತಿ ಹೆಚ್ಚು ಇಂಧನ ಬೆಲೆ ಇರುವ ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಮತ್ತೆ 2 ರೂಪಾಯಿ ಸೆಸ್ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮ ಜನಸಾಮಾನ್ಯರನ್ನು ವಂಚಿಸುವ ತಂತ್ರವಾಗಿದೆ. ಎಡರಂಗ ಸರ್ಕಾರ ಮಂಡಿಸಿರುವ ಬಜೆಟ್ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಭಾರಿ ತೆರಿಗೆ ಮತ್ತು ಸೆಸ್ ವಿಧಿಸಿ ಕರ್ನಾಟಕದಿಂದ ಇಂಧನ ತುಂಬಿಸುವಂತೆ ಕೆಎಸ್‍ಆರ್‍ಟಿಸಿಯ ಅಂತರರಾಜ್ಯ ಸೇವೆಯ ಬಸ್‍ಗಳಿಗೆ ಪರೋಕ್ಷ ನಿರ್ದೇಶನ ನೀಡಿರುವುದು ಹಾಸ್ಯಾಸ್ಪದ. 6 ವರ್ಷಗಳ ಆಡಳಿತದಲ್ಲಿ ರಾಜ್ಯದ ಸಾಲವನ್ನು ದ್ವಿಗುಣಗೊಳಿಸಿದ್ದು ಪಿಣರಾಯಿ ಸರ್ಕಾರದ ಆಡಳಿತ ಸಾಧನೆಯಾಗಿದೆ. ಸಾರ್ವಜನಿಕ ಸಾಲವನ್ನು ಕಡಿಮೆ ಮಾಡುವ ಯಾವುದೇ ದೀರ್ಘಾವಧಿ ಯೋಜನೆ ಸರ್ಕಾರ ರೂಪಿಸಿಲ್ಲ. ಸಾಲ ಮಾಡಿ ಹಣ ಪೆÇೀಲು ಮಾಡುವ ಪಿಣರಾಯಿ ಸರ್ಕಾರದ ಯತ್ನ ಖಂಡನೀಯ. ಸಾಮಾಜಿಕ ಭದ್ರತಾ ಯೋಜನೆ ಮತ್ತು ಅಭಿವೃದ್ಧಿಗೆ ಹಣ ವಿನಿಯೋಗಿಸುವ ಬದಲು ವಿವಿಧ ಉನ್ನತ ಹುದ್ದೆಗಳಿಗೆ ನೇಮಕಗೊಂಡ ನೂರಾರು ಸಿಪಿಎಂ ನಾಯಕರಿಗೆ ವೇತನ ನೀಡಲು, ಸಚಿವರು, ಉದ್ಯೋಗಿಗಳ ವಿದೇಶ ಪ್ರವಾಸ, ಹೊಸ ಕಾರು ಖರೀದಿ, ಸಚಿವರ ನಿವಾಸ ಅಲಂಕರಿಸಲು ಬಜೆಟ್‍ನಲ್ಲಿ ತೆರಿಗೆ ಹೆಚ್ಚಿಸಲಾಗಿದೆ. ಕೇರಳದಲ್ಲಿ ಅತ್ಯಂತ ಹಿಂದುಳಿದಿರುವ ವಯನಾಡು, ಇಡುಕ್ಕಿ ಮತ್ತು ಕಾಸರಗೋಡು ಜಿಲ್ಲೆಗಳ ಪ್ಯಾಕೇಜ್‍ಗಳಿಗೆ ಕೇವಲ 75 ಕೋಟಿಗಳನ್ನು ನಿಗದಿಪಡಿಸಿರುವುದು ವಂಚನೆಯಾಗಿದೆ ರವೀಶ ತಂತ್ರಿ ಕುಂಟಾರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಾಯದ ಮೇಲೆ ಬರೆ ಎಳೆದ ಬಜೆಟ್-ಇಂಧನದ ಮೇಲೆ ಸೆಸ್ ಖಂಡನೀಯ: ಬಿಜೆಪಿ
0
ಫೆಬ್ರವರಿ 03, 2023





