ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧÀವಾರ ರಾತ್ರಿ ಶ್ರೀ ದೇವರಿಗೆ ಬೆಡಿಸೇವೆ ನಡೆಯಿತು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೃತೃತ್ವದಲ್ಲಿ ವಿವಿಧ ಧಾರ್ಮಿಕ, ತಾಂತ್ರಿಕ ಕಾರ್ಯಕ್ರಮಗಳು ಜರಗಿತು. ರಾತ್ರಿ ವಸಂತಕಟ್ಟೆಪೂಜೆ, ಬೆಡಿಕಟ್ಟೆಯಲ್ಲಿ ಪೂಜೆ, ಬೆಡಿಸೇವೆ, ದರ್ಶನಬಲಿ ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳು, ಸ್ಥಳೀಯ ಭಕ್ತವೃಂದದ ನೇತೃತ್ವದಲ್ಲಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಬಾಲಗೋಕುಲದ ವಿದ್ಯಾರ್ಥಿಗಳು ಹಾಗೂ ಮಕ್ಕಳಿಂದ ನಡೆದ ಕುಣಿತ ಭಜನೆ ವಿಶೇಷ ಆಕರ್ಷಕವಾಯಿತು. ಚೆಂಡೆಮೇಳ, ವಾದ್ಯ, ವಿದ್ಯುತ್ ದೀಪಾಲಂಕರಾಗಳು ಮೆರವಣಿಗೆಗೆ ಮೆರಗನ್ನು ನೀಡಿತು.
ನಾರಂಪಾಡಿ ಬೆಡಿಮಹೋತ್ಸವ, ದರ್ಶನಬಲಿ
0
ಫೆಬ್ರವರಿ 03, 2023




.jpg)
