ಪೆರ್ಲ: ಸಾಹಿತ್ಯಾಸಕ್ತರು ಪೆರ್ಲ ವತಿಯಿಂದ ಕನ್ನಡದ ಹಿರಿಯ ಕವಿ, ವಿಮರ್ಶಕ ಡಾ. ಕೆ.ವಿ ತಿರುಮಲೇಶ್ ಅವರಿಗೆ ನುಡಿನಮನ ಕಾರ್ಯಕ್ರಮ ಫೆ. 4ಂದು ಮಧ್ಯಾಹ್ನ 2ಗಂಟೆಗೆ ಪೆರ್ಲ ಕಾಟುಕುಕ್ಕೆ ರಸ್ತೆಯ 'ಗುಲಾಬಿ'ಯಲ್ಲಿ ಜರುಗಲಿದೆ.
ಲೇಖಕ, ಉಪನ್ಯಾಸಕ ಟಿ.ಎ.ಎನ್ ಖಂಡಿಗೆ ಅಧ್ಯಕ್ಷತೆ ವಹಿಸುವರು.ವಿಶ್ರಾಂತ ಪ್ರಾಧ್ಯಾಪಕಿ ಡಾ. ಯು. ಮಹೇಶ್ವರಿ, ಕಾಸರಗೋಡು ಸರ್ಕಾರಿ ಕಾಲೇಜು ಉಪನ್ಯಾಸಕ ಡಾ. ಬಾಲಕೃಷ್ಣ ಹೊಸಂಗಡಿ, ಸಾಹಿತಿಗಳಾದ ರಾಧಾಕೃಷ್ಣ ಉಳಿಯತ್ತಡ್ಕ, ಹರೀಶ್ ಪೆರ್ಲ ಪಾಲ್ಗೊಳ್ಳುವರು.
ಇಂದು ಪೆರ್ಲದಲ್ಲಿ ಡಾ. ಕೆ.ವಿ ತಿರುಮಲೇಶ್ ನುಡಿನಮನ ಕಾರ್ಯಕ್ರಮ
0
ಫೆಬ್ರವರಿ 03, 2023




