ಕಾಸರಗೋಡು: ಜಿಲ್ಲಾ ಪಂಚಾಯಿತಿ ಆಯೋಜಿಸುವ ಜನಪ್ರಿಯ ಚಲನಚಿತ್ರೋತ್ಸವ 'ಕಾಸರಗೋಡು ಸಿನಿ ಕಾರ್ನಿವಲ್' ಅಂಬಲತ್ರದಲ್ಲಿ ಆರಂಭಗೊಮಕಡಿದೆ. ಜಿಲ್ಲೆಯ ಆಯ್ದ ಹತ್ತು ಗ್ರಾಮ ಕೇಂದ್ರಗಳಲ್ಲಿ ಪ್ರದರ್ಶನಗೊಳ್ಳಲಿರುವ ಗ್ರಾಮಾಂತರ ಚಲನಚಿತ್ರೋತ್ಸವವನ್ನು ಜಿಪಂ ಅದ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು.
ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ ಅಧ್ಯಕ್ಷತೆ ವಹಿಸಿದ್ದರು. ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಿ.ಕೆ.ಅರವಿಂದನ್, ಜಿಪಂ ಸದಸ್ಯೆ ಫಾತಿಮತ್ ಶಮ್ನಾ, ಜಿಪಂ ಕಾರ್ಯದರ್ಶಿ ಕೆ.ಪ್ರದೀಪನ್, ಕಾರ್ನಿವಲ್ ಸಮಿತಿ ಸಂಚಾಲಕ ಜಿ.ಬಿ.ವಲ್ಸನ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಕೆ.ಸವಿತಾ, ಇ.ವಿ.ಕುಂಙಂಬು, ರತೀಶ್ ಅಂಬಲತ್ತರ ಉಪಸ್ಥಿತರಿದ್ದರು. ಓಪನ್ ಫೆÇೀರಮ್‍ನಲ್ಲಿ ಕೆ.ಬಿ.ಸುಬಿನ್ ಮತ್ತು ಡಾ.ಮಂಜುಳಾ ಮಾಡರೇಟರ್‍ಗಳಾಗಿ ಸಹಕರಿಸಿದರು.
ಮಕ್ಕಳ ಪ್ಯಾಕೇಜ್ ಹೊರತಾಗಿ ಮೀರಾ ನಾಯರ್ ಅವರ ಕ್ವೀನ್ ಆಫ್ ಕತ್ವೆ, ಜಯರಾಜ್ ನಿರ್ದೇಶಿಸಿದ ಒಟ್ಟಾಲ್, ಜಯನ್ ಮಂಗಾಡ್ ನಿರ್ದೇಶಿಸಿದ ತೆಯ್ಯಾಟ್ಟಂ ಮತ್ತು ಅಮಿತ್ ಮನ್ಸೂಕರ್ ಅವರ ನ್ಯೂಟನ್ ಎಂಬೀ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು.
ಮುಂದಿನ ದಿನಗಳಲ್ಲಿ ಮಡಿಕೈ, ರಾವಣೇಶ್ವರ, ಇರಿಯಣ್ಣಿ, ಮಂಜೇಶ್ವರ, ಚಿಟ್ಟಾರಿಕಲ್, ಕಾರಡ್ಕ ಮತ್ತು ಕುಟ್ಟಿಕೋಲ್‍ನಲ್ಲಿಯೂ ಚಲನಚಿತ್ರ ಪ್ರದರ್ಶನ ನಡೆಯಲಿದೆ.
ಅಂಬಲತ್ತರದಲ್ಲಿ 'ಕಾಸರಗೋಡು ಸಿನಿ ಕಾರ್ನಿವಲ್'ಗೆ ಚಾಲನೆ
0
ಫೆಬ್ರವರಿ 03, 2023
Tags




