ಮಲಪ್ಪುರಂ: ರಾಜ್ಯ ಸರ್ಕಾರದ ರೈತ ತಂಡದೊಂದಿಗೆ ಕೃಷಿ ಅಧ್ಯಯನಕ್ಕೆಂದು ಇಸ್ರೇಲ್ ಗೆ ತೆರಳಿ ನಾಪತ್ತೆಯಾಗಿದ್ದ ಇರಿಟ್ಟಿ ಮೂಲದ ಬಿಜು ಕುರಿಯನ್ ಕೇರಳ ತಲುಪಿದ್ದಾರೆ.
ಗಲ್ಫ್ ಏರ್ ವಿಮಾನದಲ್ಲಿ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ಬಂದು ತಲಪಿರುವರು. ತಾನು ತಪ್ಪಿಸಿಕೊಂಡುದಲ್ಲ. ಜೆರುಸಲೇಂ, ಬೆತ್ಲೆಹೆಮ್ ಸೇರಿದಂತೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವುದು ನನ್ನ ಗುರಿಯಾಗಿತ್ತು ಎಂದು ಬಿಜು ಕುರಿಯನ್ ಹೇಳಿದ್ದಾರೆ. ಅನುಮತಿ ಸಿಗುವುದಿಲ್ಲ ಎಂದುಕೊಂಡು ಗುಂಪಿಗೆ ಹೇಳಲಿಲ್ಲ ಎಂದರು. ತಾನು ಬೇಕೆಂದೇ ತಪ್ಪಿಸಿಕೊಂಡೆ ಎಂಬ ಸುದ್ದಿ ಹರಡಿದಾಗ ಬೇಸರವಾಯಿತು ಎಂದಿರುವರು. ವಾಪಸಾದ ಬಿಜು ಅವರು ಸರ್ಕಾರ ಮತ್ತು ತಂಡದ ಸದಸ್ಯರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದರು.
ಅವರು ಭಾನುವಾರ 19 ರಂದು ಹಿಂತಿರುಗಬೇಕಿತ್ತು. ಅದಕ್ಕೂ ಮುನ್ನ ಪುಣ್ಯಭೂಮಿ ತಲುಪಿ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಲು ನಿರ್ಧರಿಸಿದ್ದೆ. ಮೊದಲು ಜೆರುಸಲೇಮಿಗೆ ಮತ್ತು ಮರುದಿನ ಬೆತ್ಲೆಹೆಮಿಗೆ ತೆರಳಿದ್ದೆ. ಶನಿವಾರ ಹಿಂತಿರುಗಲು ಪ್ರಯತ್ನಿಸುತ್ತಿರುವಾಗ, ನಾನು ವಾಟ್ಸ್ ಆಫ್ ಮತ್ತು ಇತರ ಮಾಧ್ಯಮಗಳ ಮೂಲಕ ಸಂಪರ್ಕಿಸಲು ಸಮಸ್ಯೆಗಳನ್ನು ಎದುರಿಸಬೇಕಾಯಿತು. ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಎಲ್ಲವೂ ಪ್ರತಿಕೂಲವಾಗಿತ್ತು. ನಾನು ಚಿಂತೆಯಲ್ಲಿದ್ದ ಕಾರಣ ಇತರ ವಿಷಯಗಳತ್ತ ಗಮನ ಹರಿಸಲಾಗಲಿಲ್ಲ ಎಂದು ಬಿಜು ಹೇಳಿದ್ದಾರೆ.
ಅಲ್ಲಿಯೇ ಉಳಿಯಬೇಕಾಯಿತು. ಅಂತಹ ಹಂತದಲ್ಲಿ ಗುಂಪಿನೊಂದಿಗೆ ಮರಳಲು ಸಾಧ್ಯವಾಗಲಿಲ್ಲ. ಕುಟುಂಬದವರು, ನನ್ನೊಂದಿಗಿದ್ದ 26 ಮಂದಿ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಶೋಕನ್ ಸರ್, ಸಚಿವರು, ಸರ್ಕಾರ ಸೇರಿದಂತೆ ಎಲ್ಲರ ಬಳಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ' ಎಂದು ಬಿಜು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ತನ್ನ ಸಹೋದರ ಟಿಕೆಟ್ ಖರೀದಿಸಿ ತನಗೆ ಕಳುಹಿಸಿದ್ದು ಎಂದು ಬಿಜು ಕುರಿಯನ್ ಹೇಳಿದ್ದಾರೆ. ಆಧುನಿಕ ಕೃಷಿ ಪದ್ಧತಿಯನ್ನು ಕಲಿಯಲು ಕೇರಳದಿಂದ ಇಸ್ರೇಲ್‍ಗೆ ಬಂದಿದ್ದ ತಂಡದಿಂದ ಫೆಬ್ರವರಿ 16 ರಂದು ಬೆಳಿಗ್ಗೆ 7:00 ಗಂಟೆಗೆ ನಾಪತ್ತೆಯಾಗಿದ್ದರು.
ಹಿಂತಿರುಗಿದ ಬಿಜು: ಜೆರುಸಲೆಮ್ ಮತ್ತು ಬೆಥ್ಲಹೇಮ್ ಸೇರಿದಂತೆ ಪವಿತ್ರ ಸ್ಥಳಗಳನ್ನು ಭೇಟಿ ಮಾಡಲು ತೆರಳಿ ಬಾಕಿಯಾದೆ: ಬಿಜು
0
ಫೆಬ್ರವರಿ 27, 2023


