ಕಣ್ಣೂರು: ಎಲ್ಲ ಸರಕಾರಿ ಪ್ರಾಥಮಿಕ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ತೀವ್ರವಾಗಿದೆ.
ಮಕ್ಕಳಿಗೆ ಕೆಮ್ಮು ಮತ್ತು ಜ್ವರದ ಸಿರಪ್‍ಗಳು ಲಭ್ಯವಿಲ್ಲ. ಖಾಸಗಿ ಔಷಧಾಲಯಗಳಲ್ಲಿ ಔಷಧ ಖರೀದಿಸಬೇಕಾದ ಪರಿಸ್ಥಿತಿ ಕೆಲವು ವಾರಗಳಿಂದ ಇದೆ.
ಔಷಧಗಳ ತೀವ್ರ ಕೊರತೆಯಿಂದ ಕಣ್ಣೂರಿನ ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜಿನ ನೂರಾರು ರೋಗಿಗಳು ಪರದಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆ ಹಾಗೂ ಸಮೀಪದ ಜಿಲ್ಲೆಗಳ ಸಾವಿರಾರು ಜನರು ಪ್ರತಿದಿನ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಔಷಧ ಲಭ್ಯವಿಲ್ಲ. ವೈದ್ಯರು ಬರೆದಿರುವ ಔಷಧ ಚೀಟಿಯೊಂದಿಗೆ ಫಾರ್ಮಸಿಗೆ ಹೋದರೆ ಇಲ್ಲ ಎಂಬ ಉತ್ತರ ಮಾತ್ರ ಕೇಳಿಬರುತ್ತದೆ ಎನ್ನುತ್ತಾರೆ ಜನ. ಆ್ಯಂಟಿಬಯೋಟಿಕ್‍ಗಳು, ಮಕ್ಕಳಿಗೆ ಸಿರಪ್‍ಗಳು ಮತ್ತು ಅಗತ್ಯ ಔಷಧಿಗಳ ತೀವ್ರ ಕೊರತೆ ಎದುರಿಸುತ್ತಿದೆ. ಹೃದ್ರೋಗಿಗಳು ಮತ್ತು ಪಾಶ್ರ್ವವಾಯು ಪೀಡಿತರು ತೆಗೆದುಕೊಳ್ಳುವ ಹೆಚ್ಚಿನ ಔಷಧಿಗಳು ಫಾರ್ಮಸಿಯಲ್ಲಿ ಲಭ್ಯವಿಲ್ಲ.
ಮೆಡಿಕಲ್ ಕಾಲೇಜಿಗೆ ಒಂದು ವರ್ಷಕ್ಕೆ ಔಷಧಗಳನ್ನು ದೊಡ್ಡ ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತದೆ. ಇದರ ಪ್ರಕಾರ ವೈದ್ಯಕೀಯ ಕಾಲೇಜು ಅಧಿಕಾರಿಗಳು ನೀಡಿರುವ ಪಟ್ಟಿಯಲ್ಲಿರುವ ಬಹುತೇಕ ಔಷಧಗಳು ಇನ್ನೂ ಸಿಗದೇ ಇರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಬಂದ ಔಷಧಗಳು ಅಗತ್ಯ ಪ್ರಮಾಣದಲ್ಲಿ ಸಿಕ್ಕಿಲ್ಲ. ಔಷಧಿಗಳನ್ನು ವಿತರಿಸುವ ಕೇರಳ ವೈದ್ಯಕೀಯ ಸೇವಾ ನಿಗಮದ ಡಿಪೆÇೀದಲ್ಲಿ ಸಾಕಷ್ಟು ಔಷಧಿಗಳಿಲ್ಲದ ಕಾರಣ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಂತದಲ್ಲಿಯೇ ಔಷಧ ಕೊರತೆಯಿಂದ ಬಿಕ್ಕಟ್ಟು ಎದುರಾಗಿದೆ.
ಕೋಝಿಕ್ಕೋಡ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸರಕಾರ ವರ್ಷಕ್ಕೆ 35 ಕೋಟಿ ರೂ.ಗಳ ಔಷಧಗಳನ್ನು ನೀಡಿದರೆ, ಪರಿಯಾರಂ ನಲ್ಲಿ ಕೇವಲ 7 ಕೋಟಿ ರೂ. ಔಷಧಿ ಮಾತ್ರ ವಿತರಿಸಲಾಗುತ್ತಿದೆ. ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಅಧಿಕಾರಿಗಳು ಪ್ರತಿ ವರ್ಷ 25 ಕೋಟಿ ರೂ.ಗಳ ಔಷಧಗಳ ಅಗತ್ಯವಿದೆ ಎಂದು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ, ಆರೋಗ್ಯ ಇಲಾಖೆಯಿಂದ ವರ್ಷಕ್ಕೆ 9 ಕೋಟಿ ರೂ.ಔಷಧಿಗಳು ಮಾತ್ರ ರವಾನೆಯಾಗುತ್ತದೆ. ಈ ಪೈಕಿ ಕಳೆದ ಒಂದು ವರ್ಷದೊಳಗೆ ಪರಿಯಾರಂ ಗೆ ಬಂದಿರುವುದು ಕೇವಲ 7 ಕೋಟಿ ರೂ.
ಗರ್ಭಿಣಿಯರು ನಿತ್ಯ ಸೇವಿಸಬೇಕಾದ ಪೋಲಿಕ್ ಆಸಿಡ್ ಮಾತ್ರೆಗಳೂ ಸಿಗದ ಪರಿಸ್ಥಿತಿ. ಅಪಸ್ಮಾರ ರೋಗಿಗಳಿಗೆ ಔಷಧಗಳು ಮತ್ತು ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಔಷಧಗಳು ಲಭ್ಯವಿಲ್ಲ. ಔಷಧಾಲಯದಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ರೋಗಿಗಳು ತಮ್ಮ ಪ್ರಿಸ್ಕ್ರಿಪ್ಷನ್‍ನ ಅರ್ಧದಷ್ಟೂ ಇಲ್ಲದೆ ಹಿಂತಿರುಗಬೇಕಾಗಿದೆ. ಇದರಿಂದ ಬಡ ಕುಟುಂಬದ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಕ್ತದೊತ್ತಡ ಮತ್ತು ಮಧುಮೇಹ ಸೇರಿದಂತೆ ದೈನಂದಿನ ಬಳಕೆಯ ಔಷಧಗಳು ಅತೀ ಹೆಚ್ಚು ಬೇಕಾದ ಔಷಧಗಳಾಗಿವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧದ ತೀವ್ರ ಕೊರತೆ: ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಔಷಧಿ ಇಲ್ಲದೆ ಪರದಾಡುವ ರೋಗಿಗಳು
0
ಫೆಬ್ರವರಿ 27, 2023


