ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರು ನಿನ್ನೆ ನಾಡೋಜ ಡಾ. ಕಿಞ್ಞಣ್ಣ ರೈ ಸಾಂಸ್ಕøತಿಕ ಕನ್ನಡ ಅಧ್ಯಯನ ಭವನದ ಉದ್ದೇಶಿತ ನಿವೇಶನಕ್ಕೆ ಮತ್ತು ಕಯ್ಯಾರ ಕಿಞ್ಞಣ್ಣ ರೈ ಅವರ ನಿವಾಸ ಕವಿತಾ ಕುಟೀರಕ್ಕೆ ಭೇಟಿ ನೀಡಿದರು. ಈ ಸಂದರ್ಭ ಗೃಹರಕ್ಷಕದಳ ಮಂಗಳೂರಿನ ಕಮಾಂಡೆಟ್ ಮತ್ತು ಸಾಹಿತಿ ಡಾ.ಮುರಳಿಮೋಹನ ಚೂಂತಾರ್ ಮತ್ತು ಕಸಾಪ ಕೇರಳ ಗಡಿನಾಡ ಘಟಕದ ರಾಮಚಂದ್ರ ಭಟ್ ಅವರು ಜೊತೆಗಿದ್ದರು.
ಕಯ್ಯಾರ ಕಿಞ್ಞಣ್ಣ ರೈ ಅವರ ಪುತ್ರಾದ ಡಾ.ಪ್ರಸನ್ನ ರೈ, ಕೃಷ್ಣ ಪ್ರದೀಪ ಮತ್ತು ಕುಟುಂಬದವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.
ಸ್ಮಾರಕ ಭವನ ನಿರ್ಮಾಣ, ಭವಿಷ್ಯದಲ್ಲಿ ಅಲ್ಲಿ ಇರಲೇ ಬೇಕಾದ ಪುಸ್ತಕ ಸಂಗ್ರಹಾಲಯ ಮತ್ತು ನಡೆಯಬೇಕಾಗಿರುವ ಸಾಹಿತ್ಯಿಕ ಕಾರ್ಯಕ್ರಮ - ಗಡಿನಾಡಿನಲ್ಲಿ ತನ್ಮೂಲಕ ಕನ್ನಡದ ಚಲನಶೀಲತೆಯ ಅಗತ್ಯಗಳ ಕುರಿತು ತಿಳಿಸಿ ಬೆಂಬಲ ವ್ಯಕ್ತಪಡಿಸಿದ ಡಾ.ಮಹೇಶ್ ಜೋಷಿ ಅವರು ಗಡಿನಾಡ ಸಾಹಿತ್ಯ ಮೇರು ಡಾ.ಕಯ್ಯಾರರ ಅಪ್ರತಿಮ ಸಾಹಿತ್ತಿಕ ಸೇವೆಗಳನ್ನು ಸ್ಮರಿಸಿ ಕಸಾಪದ ಸಕಲ ಬೆಂಬಲದ ಭರವಸೆ ನೀಡಿದರು.



