ಉಪ್ಪಳ: ಕುಡಾಲು ಮೇರ್ಕಳ ಗ್ರಾಮದ ಕನಕಪ್ಪಾಡಿ ಶ್ರೀ ಮಹಾವಿಷ್ಣು ಕ್ಷೇತ್ರದ ವಾರ್ಷಿಕ ಉತ್ಸವವು ಫೆ.3 ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ,ಸಾನಿಧ್ಯ ಕಲಶಪೂಜೆ,ಕಲಶಾಭಿµಕದ ಬಳಿಕ ಬೆಳಗಿನ ಪೂಜೆ ನಡೆಯಲಿದೆ.9 ರಿಂದ ದೇವರ ರಾಜಾಂಗಣ ಪ್ರವೇಶ,ಭೂತ ಬಲಿ,ಉತ್ಸವ ದರ್ಶನ ಬಲಿ,ಬಟ್ಟಲು ಕಾಣಿಕೆ ,ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 3.30 ರಿಂದ ಸಭಾ ಕಾರ್ಯಕ್ರಮ ಸ್ಥಳೀಯ ಮಕ್ಕಳಿಂದ ನೃತ್ಯ ಪ್ರದರ್ಶನ ಮತ್ತು ಕುಣಿತ ಭಜನೆಯ ಬಳಿಕ ಉಪ್ಪಳ ಗೀತ್ ಸಂಗೀತ್ ತಂಡದಿಂದ ಭಕ್ತಿಗಾನ ವೈಭವ ರಸಮಂಜರಿ ನಡೆಯಲಿದೆ.ರಾತ್ರಿ 7 ರಿಂದ ನಿತ್ಯಪೂಜೆ,8 ರಿಂದ ರಂಗಪೂಜೆ,ಪ್ರಸಾದ ವಿತರಣೆಯ ಬಳಿಕ ಮಂತ್ರಾಕ್ಷತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ನಾಳೆ ಕನಕಪ್ಪಾಡಿ ಶ್ರೀ ಮಹಾವಿಷ್ಣು ಕ್ಷೇತ್ರದ ವಾರ್ಷಿಕ ಉತ್ಸವ
0
ಫೆಬ್ರವರಿ 01, 2023




