HEALTH TIPS

ಬಜಲ ಕರಿಯ ಸಾರಂಗ ಪಾಣಿ ಮಹಾವಿಷ್ಣು, ಶ್ರೀ ದುರ್ಗಾ ಕ್ಷೇತ್ರದ ವಾರ್ಷಿಕ ಉತ್ಸವ


                  ಮಂಜೇಶ್ವರ: ವರ್ಕಾಡಿ ಬಜಲ ಕರಿಯ ಸಾರಂಗ ಪಾಣಿ ಮಹಾವಿಷ್ಣು, ಶ್ರೀ ದುರ್ಗಾ ಕ್ಷೇತ್ರದ ವಾರ್ಷಿಕ ಉತ್ಸವವು ಫೆ.5 ಮತ್ತು 6 ರಂದು ಜರಗಲಿರುವುದು. ಈ ಕ್ಷೇತ್ರದಲ್ಲಿ ನೆಲೆಯೂರಿದ ಮಹಾವಿಷ್ಣು ಅಪರೂಪದ ವಿಷ್ಣುವಾಗಿದ್ದು ,ವಿಷ್ಣುವಿನ ಮೂಲರೂಪವಾಗಿದ್ದು  ವಿಷ್ಣುವಿನ ಅವತಾರ ರೂಪಕ್ಕಿಂತ ಪ್ರಬಾವಶಾಲಿಯಾಗಿದೆ.
         ಸುಮಾರು 1200 ವರರ್ಷದ ಹಿಂದೆ ಕ್ಷೇತ್ರ ಸ್ಥಾಪನೆಗೊಂಡು ಸುಮಾರು 400 ವರ್ಷಗಳ ಹಿಂದೆ ನಶಿಸಿ ಹೋಗಿರುವುದಾಗಿ ಮತ್ತು ಇದು ವರ್ಕಾಡಿ ಗ್ರಾಮದ ಪ್ರಧಾನ ದೇವಸ್ಥಾನಗಳಲ್ಲಿ ಒಂದಾಗಿದ್ದು.ಇಲ್ಲಿನ ದುರ್ಗೆಯು ಶಕ್ತಿ ಶಾಲಿ ಎಂಬದಾಗಿ ಅಷ್ಟಮಂಗಳ ಪ್ರಶ್ನೆ ಯಲ್ಲಿ ತಿಳಿದು ಬಂದಿದೆ. ಕ್ಷೇತ್ರ ಅಳಿದು ಹೋದ ಸ್ಥಳದ ಮೇಲೆಯೆ  ಕಾಲಾನಂತರ ಅದೇ ಸ್ಥಳದಲ್ಲಿ ಶ್ರೀ ವಿದ್ಯಾ ಭೋದಿನಿ ಶಾಲೆಯು ಸ್ಥಾಪನೆಗೊಂಡು ಸುಮಾರು 125 ವರ್ಷಗಳ ಕಾಲ ಇಲ್ಲಿ  ವಿಧ್ಯಾದಾನ, ಅನ್ನದಾನ ಮತ್ತು ತಿಂಗಳ ಒಂದು ಶುಕ್ರವಾರ ಭಜನೆ ನಡೆಯುತ್ತಿತ್ತು. ಬಳಿಕ ಈ ಸ್ಥಳವು ಶಾಲೆಗೆ ಸೂಕ್ತವಲ್ಲವೆಂದು ಸ್ಥಳಾಂತರಿಸಲಾಯಿತು. ಈ ಪುಣ್ಯ ಕ್ಷೇತ್ರದಿಂದ ಶಾಲೆಯ ವರ್ಗಾವಣೆ ಸರಿಯಲ್ಲವೆಂದು ಸುತ್ತು ಮುತ್ತಲಿನ ಪ್ರದೇಶದ ಕೆಲವು ಮನೆಗಳಲ್ಲಿ ನಡೆದ ವ್ಯತಿರಿಕ್ತ ಪರಿಸ್ಥಿತಿಗಳಿಂದ ತಿಳಿದು ಬಂದು ಪ್ರಶ್ನೆ ಚಿಂತನೆಯಲ್ಲಿ ದೇವಸ್ಥಾನ ಪುನರ್ ನಿರ್ಮಾಣ ಅನಿವಾರ್ಯವೆಂದು, ಊರಪರವೂರ ಭಕ್ತರಿಗೆ ಈ ಮಹಾ ವಿಷ್ಣು ದೇವರ  ಸೇವೆ ಮಾಡುವ ಸುವರ್ಣವಕಾಶವೆಂದು ತಿಳಿದು ಬಂದಿದೆ.
         ಶ್ರೀ ಕ್ಷೇತ್ರವು  ಬೆಟ್ಟದಮೇಲೆ ನೆಲೆಯಾಗಿದ್ದು, ಮೂರುದಿಕ್ಕುಗಳಲ್ಲಿ ನೀರು ಹರಿಯುವ ನದಿ ( ತೋಡು ) ಗಳಿದ್ದು, ದೇವರಿಗೆ  ತೃಪ್ತಿ ದಾಯಕ ಸ್ಥಳವೆಂದು ಚಿಂತನೆಯಲ್ಲಿ  ತಿಳಿದು ಬಂದಿದ್ದು ಇಲ್ಲಿ  ದುರ್ಗೆ, ಗಣಪತಿ, ನಾಗ  ಮತ್ತು ಗಂಧರ್ವರು ನೆಲೆಯೂರಿದ್ದಾರೆ. ಕಳೆದ 2022 ಫೆ. 2 ರಿಂದ 6 ರ ತನಕ ಊರ ಪರವೂ ಭಕ್ತರ ನೆರವಿನಿಂದ  ಶ್ರೀದೇವರ  ಪ್ರತಿಷ್ಠಾಪನೆಗೊಂಡು ಬ್ರಹ್ಮಕಲಶೋತ್ವವ ಜರಗಿದೆ. ಇಲ್ಲಿ ಶ್ರೀ ದೇವರಿಗೆ  ನಿತ್ಯಮೂರು ಹೊತ್ತು ಪೂಜೆ ಜರಗುತ್ತಿದ್ದು ,ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ  ಮತ್ತು ತಿಂಗಳಿಗೊಮ್ಮೆ  ಗಣಪತಿ ದೇವರಿಗೆ  ಸಂಕಷ್ಟಿ ಪೂಜೆ  ಮತ್ತು ಪ್ರತಿ ತಿಂಗಳ ಪ್ರಥಮ ಶುಕ್ರವಾರ ದುರ್ಗೆಗೆ  ವಿಶೇಷ ಪೂಜೆಯು ಜರಗುತ್ತಿದೆ. ಫೆ.5 ಮತ್ತು 6 ರಂದು ಕ್ಷೇತ್ರದಲ್ಲಿ ಪ್ರಥಮ ವಾರ್ಷಿಕೋತ್ಸವ ಜರಗಲಿರುವುದು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries