ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಬುಧವಾರ ಸಂಭ್ರಮದ ಚಲನೆ ನೀಡಲಾಯಿತು. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಬೆಳಗ್ಗೆ ಗಣಪತಿ ಹವನ, ಧ್ವಜಾರೋಹಣ, ನವಕಾಭಿಷೇಕ, ಪೆರ್ಲ ಶ್ರೀ ಸತ್ಯನಾರಾಯಣ ಭಜನಾಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ, ಉಗ್ರಾಣ ಭರಣ ಕಾರ್ಯಕ್ರಮ ನಡೆಯಿತು. ಸಂಜೆ ಪೆರ್ಲ ಶ್ರೀ ಅಯ್ಯಪ್ಪ ಸ್ವಾಮಿ ಕುಣಿತಭಜನ ತಂಡದಿಂದ ಕುಣಿತಭಜನೆ ನಡೆಯಿತು.
3ರಂದು ಬೆಳಗ್ಗೆ6ರಿಂದ ಚಂಡಿಕಾ ಹವನ ತುಲಾಭಾರ, ರಾತ್ರಿ 8ಕ್ಕೆ ಶ್ರೀ ಉಳ್ಳಾಲ್ತೀ ಭಂಡಾರ ಹೊರಡುವುದು, ಶ್ರೀ ಉಳ್ಳಾಲ್ತಿಯ ಅಶ್ವರಥ ಸವಾರಿ, ಉಳ್ಳಾಲ್ತೀ ನೇಮ ನಡೆಯುವುದು. 4ರಂದು ಬೆಳಗ್ಗೆ 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ಸಂಜೆ 7.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹೊರಡುವುದು, ರಾತ್ರಿ 8.30ಕ್ಕೆ ತೊಡಙಳ್, ಕುಳಿಚ್ಚಾಟ್, ಕುಣಿತ ಭಜನೆ ನಡೆಯುವುದು. 5ರಂದು ಬೆಳಗ್ಗೆ 9ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯುವುದು. ಪ್ರತಿದಿನ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಲಿರುವುದು.
ಇಡಿಯಡ್ಕ ಜಾತ್ರಾ ಮಹೋತ್ಸವ ಆರಂಭ
0
ಫೆಬ್ರವರಿ 02, 2023





