ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ರಂಗಚಿನ್ನಾರಿಯ ಮಹಿಳಾ ಘಟಕ ವತಿಯಿಂದ ಮೂರನೇ ಸರಣಿ ಕಾರ್ಯಕ್ರಮ 'ನಾರಿ ಚಿನ್ನಾರಿ ಸಂಸ್ಕøತಿ ಸಿರಿ' ಮಾ 19ರಂದು ಮಧ್ಯಾಹ್ನ 3ಕ್ಕೆ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ.
ಹಿರಿಯ ಜಾನಪದ ಕಲಾವಿದೆ ಚೋಮು ಮಧೂರು ಸಮಾರಂಭ ಉದ್ಘಾಟಿಸುವರು. ನಾರಿ ಚಿನ್ನಾರಿ ಸಂಸ್ಥೆ ಗೌರವಾಧ್ಯಕ್ಷೆ, ಖ್ಯಾತ ಲೆಕ್ಕ ಪರಿಶೋಧಕಿ ತಾರಾ ಜಗದೀಶ್ ಅಧ್ಯಕ್ಷತೆ ವಹಿಸುವರು. ವಕೀಲೆ ಕುಸುಮಾ ಕಾಸರಗೋಡು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಿಕೆ ಡಾ. ಯು. ಮಹೇಶ್ವರಿ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು.
ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ಎಚ್. ಅರ್ಚನಾ ಅವರಿಂದ ಮಹಿಳೆ ಮತ್ತು ಆರೋಗ್ಯದ ಬಗ್ಗೆ ಸಂವಾದ ನಡೆಯುವುದು. ಜಾನಪದ ಕಲಾವಿದೆ ಚೋಮು ಅವರಿಂದ ತುಳು ಜನಪದ ಹಾಡು, ಕುಮಾರಿ ಅವಿಕಾ ಅವರಿಂದ ನೃತ್ಯ, ರಿಯ ಎಸ್. ಕೂಡ್ಲು ಅವರಿಂದ ಜಾನಪದ ನೃತ್ಯ, ಹರಿಣಾಕ್ಷಿ ಅವರಿಂದ ಶಾಸ್ತ್ರೀಯ ಸಂಗೀತ, ಸುಲೋಚನಾ ಎಸ್.ಎನ್ ಭಾಟ್ ಅವರಿಂದ ಕವನ ವಾಚನ, ಶರಣ್ಯಾ ನಾರಾಯಣನ್ ಅವರಿಂದ ಏಕಪಾತ್ರಾಭಿನಯ, ಮಣಿಕಂಠ ಅವರಿಂದ ತಬಲಾ ವಾದನ, ವರ್ಷಾ ಅವರಿಂದ ಭಕ್ತಿಗೀತೆ, ಸಮೃದ್ಧಿ ಕಾಮತ್ ಅವರಿಂದ ಯೋಗ ಪ್ರದರ್ಶನ, ಬೆಳ್ಳಾರೆ ಸಹೋದರಿಯರಾದ ಸುಜಾತಾ ಕುಶ ಮತ್ತು ಆಶಾ ಹರೀಶ್ಚಂದ್ರ ಅವರಿಂದ ಜಾನಪದ ಗೀತೆ, ಪ್ರಮಿಳಾ ಚುಳ್ಳಿಕಾನ ಅವರಿಂದ ಕಾವ್ಯಧಾರೆ, ಉಮಾ ಕಡಪ್ಪುರ ಅವರಿಂದ ಜಾನಪದ ಹಾಡು(ನಾಡನ್ ಪಾಟ್)ನಡೆಯುವುದು.




