ಕಾಸರಗೋಡು: ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಜಾತ್ರಾ ಮಹೋತ್ಸವ ಮಾ. 30ರಿಂದ ಏ. 3ರ ವರೆಗೆ ಜರುಗಲಿದ್ದು, ಉತ್ಸವದ ಯಶಸ್ಸಿಗಾಗಿ ಆಡಳಿತ ಮಂಡಳಿ ಹಾಗೂ ವಿಶೇಷ ಆಹ್ವಾನಿತರ ಸಮಾಲೋಚನಾ ಸಭೆ ದೈವಸ್ಥಾನದಲ್ಲಿ ಜರುಗಿತು. ಆಡಳಿತ ಮೊಕ್ತೇಸರ್ ಎ. ರಮೇಶ್ ರೈ ಕೋಟೆಕುಂಜ ಅಧ್ಯಕ್ಷತೆ ವಹಿಸಿದ್ದರು.
ಮೊಕ್ತೇಸರ್ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು, ಮಾಜಿ ಆಡಳಿತ ಮೊಕ್ತೇಸರ್ ಎ. ಮಂಜುನಾಥ ರೈ ಕೋಟೆಕುಂಜ ಮಾರ್ಗದರ್ಶನ ನೀಡಿದರು. ಆಡಳಿತ ಮಂಡಳಿಯು ಪಾರದರ್ಶಕ ಆಡಳಿತ ವ್ಯವಸ್ಥೆಗೆ ಪೂರಕವಾದ ಹಾಗೂ ಅಭಿವೃದ್ಧಿಗೆ ನಿರ್ಮಾಣಗಳಿಗೆ ಪೂರಕ ಪ್ರಮುಖ ತೀರ್ಮಾನಗಳನ್ನು ಕೈಗೊಂಡಿತು. ಈ ಹಿಂದಿನ ವಾಡಿಕೆಯಂತೆ ನಿಗದಿತ ಪ್ರದೇಶ ಯಾ ಮನೆತನದವರಿಂದ ಸಂಕ್ರಾತಿ ನಿರ್ವಹಣೆಗೆ ಸರಿಯಾದ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು.
ದೈವಸ್ಥಾನದ ಆಡಳಿತ ಸುಸೂತ್ರವಾಗಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಊರ ಹತ್ತು ಸಮಸ್ತರ ಪರವಾಗಿ ಎಲ್ಲಾ ಪ್ರದೇಶಗಳಿಂದ ಎಲ್ಲಾ ಸಮಾಜ ಬಂಧುಗಳ ಪ್ರತಿನಿಧಿಗಳನ್ನೊಳಗೊಂಡ ನಿಗದಿತ ಯೋಜನೆಗಿರುವ ಅಭಿವೃದ್ದೀ ಸಮಿತಿಯನ್ನು ರಚಿಸಲು, ದೇವಸ್ವಂ ಬೋರ್ಡ್ ಅನುಮತಿ ಕೋರಲು ತೀರ್ಮಾನಿಸಲಾಯಿತು.
ಈ ನಿಟ್ಟಿನಲ್ಲಿ ವಿವಿಧ ಪ್ರದೇಶಗಳಿಂದ ವಿಶೇಷ ಆಹ್ವಾನಿತರನ್ನು ಸಭೆಯಲ್ಲಿ ಆರಿಸಲಾಯಿತು. ಬೆದ್ರಡ್ಕ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪೂರಕವಾಗಿ ಚಪ್ಪರ, ಧ್ವನಿ ಬೆಳಕು, ಅಲಂಕಾರ, ವಿಡೀಯೋ , ಉಪಹಾರ, ಪಾನೀಯ, ಸಂತೆಗಳ ವ್ಯವಸ್ತಿತ ನಿರ್ವಹಣೆ, ಕಚೇರಿ ನಿರ್ವಹಣೆ, ಪಾಕಿರ್ಂಗ್, ಸಾಂಸ್ಕøತಿಕ ಕಾರ್ಯಕ್ರಮ ವೇದಿಕೆ ನಿರ್ವಹಣೆ,ಸೋಶಿಯಲ್ ಮೀಡೀಯಾ ನಿರ್ವಹಣೆ, ಪತ್ರಿಕಾ ಮಾಧ್ಯಮ ಪ್ರಚಾರ ಸೇರಿದಂತೆ ವಿವಿಧ ತಂಡಗಳಿಗೆ ಜವಾಬ್ದಾರಿ ಹಂಚಲಾಯಿತು.
ಮೊಕ್ತೇಸರರಾದ ಅನಂತ ವಿಷ್ಣು ಹೇರಳ ಉಡುವಣ್ಣಾಯ,ಪಿ. ರಾಮಪ್ರಸಾದ್ ಬಲ್ಲಾಳ್ ಚಿಪ್ಪಾರು,ಶೀನ ಶೆಟ್ಟಿ ಬಳ್ಳೂರು, ಮಲಬಾರ್ ದೇವಸ್ವಂ ಇನ್‍ಸ್ಪೆಕ್ಟರ್ ರಘು, ಆಡಳಿತ ಮಂಡಳಿ ಪ್ರತಿನಿಧಿ ಲಕ್ಷ್ಮಣ ನೋಂಡ ಕೋಟೆಕುಂಜ, ಪ್ರಮುಖರಾದ ವಾಸುದೇವ ಕಾರಂತ ಉಜಿರೆಕೆರೆ, ಶೀನ ಶೆಟ್ಟಿ ಕಜೆ, ರಾಮ ಶೆಟ್ಟಿ ಬಳ್ಳೂರು ಉಪಸ್ತಿತರಿದ್ದು ಅಭಿಪ್ರಾಯ ವ್ಯಕ್ತಪಡಿಸಿದರು. ಮೋಹನ್ ಕುಮಾರ್ ಆಳ್ವ ಕೋಟೆಕುಂಜ, ಚಂದ್ರಹಾಸ ಶೆಟ್ಟಿ ಮಜಲು, ಗಣೇಶ್ ಭಂಡಾರಿ ಮಾಯಿಪ್ಪಾಡಿ, ಜಗದೀಶ ಆಚಾರ್ಯ ಕಂಬಾರು, ಭೋಜರಾಜ ಆಚಾರ್ಯ ದೇಶಮಂಗಲ, ಪ್ರಭಾಕರ ಕಾರಂತ ದೇಶಮಂಗಲ, ಹರಿಪ್ರಸಾದ್ ಶೆಟ್ಟಿ ಕಂಬಾರು, ದೇರಣ್ಣ ಶೆಟ್ಟಿ ಕಂಬಾರು, ರವಿ ಬಿ.ಪಿ., ಕಮಲಾಕ್ಷ ಬೆಳ್ಚಪಾಡ ಕೆ. ಬಿ , ಕಿಶೋರ್ ಹೇರಳ ಉಡುವ, ಬಾಲಕೃಷ್ಣ ಶೆಟ್ಟಿ ಬಳ್ಳೂರು, ಶಿವಶಂಕರ ಆಳ್ವ ಕೋಟೆಕುಂಜ,ಪರಮೇಶ್ವರ ದೇವಾಡಿಗ, ಉದಯ ದೇವಾಡಿಗ, ರತೀಶ್ ಶೆಟ್ಟಿ ಬಳ್ಳೂರು, ರಾಜೇಶ್ ಶೆಟ್ಟಿ ಮಂಟಮೆ, ರಾಮಕೃಷ್ಣ ಆಚಾರ್ಯ, ನವನೀತ ರೈ ಕಜೆ,ಜಯರಾಮ್ ರೈ, ರಘು ದೇವಾಡಿಗ, ಶಶಿಕಾಂತ ದೇವಾಡಿಗ, ನಾರಾಯಣ ಆಚಾರ್ಯ ಕಂಬಾರು, ಸುಂದರ ದೇವಾಡಿಗ, ತಿಮ್ಮಪ್ಪ ಪಾಟಾಳಿ , ಶ್ರೀಧರ ಪಾಟಾಳಿ , ರಾಮಕೃಷ್ಣ ಅಮ್ಚಿಕೆರೆ, ಮಹಾಲಿಂಗ ಶೆಟ್ಟಿ ಉಪಸ್ಥಿತರಿದ್ದರು.
ಮೋಹನ್ ಕುಮಾರ್ ಶೆಟ್ಟಿ ಅಡ್ಕ ಸಿರಿಬಾಗಿಲು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಲೋಕೇಶ್ ಎಂ.ಬಿ ಆಚಾರ್ ಕಂಬಾರ್ ವಂದಿಸಿದರು.
ಮಾ. 30ರಿಂದ ಬೆದ್ರಡ್ಕ ಜಾತ್ರೋತ್ಸವದ-ಆಡಳಿತ ಮಂಡಳಿ, ವಿಶೇಷ ಆಹ್ವಾನಿತರ ಸಮಾಲೋಚನಾ ಸಭೆ
0
ಮಾರ್ಚ್ 17, 2023
Tags

