ಬದಿಯಡ್ಕ: ಏತಡ್ಕ ಗದ್ದೆಮನೆ ನಾಗರಕ್ತೇಶ್ವರೀ ದೈವಸ್ಥಾನದಲ್ಲಿ ಶುದ್ಧಿಕಲಶ, ಚೈತನ್ಯವೃದ್ಧಿ ಹಾಗೂ ವರ್ಷಾವಧಿ ದೈವದ ಕೋಲ ಜರಗಿತು. ಗುರುವಾರ ಸಂಜೆ ನಾಗರಕ್ತೇಶ್ವರೀ ದೈವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ ಜರಗಿತು.
ಶುಕ್ರವಾರ ಬೆಳಗ್ಗೆ ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ಶ್ರೀಮಾತಾ ಹವ್ಯಕ ಭಜನಾ ಸಂಘ ಬದಿಯಡ್ಕ ಇವರಿಂದ ಭಜನೆ ಜರಗಿತು. ಶನಿವಾರ ಸಂಜೆ ನಾಗಬನದಲ್ಲಿ ತಂಬಿಲ, ಶ್ರೀ ದುರ್ಗಾ ಭಜನಾ ಸಂಘ, ಶ್ರೀಕೃಷ್ಣ ಮಹಿಳಾ ಸಂಘ ವಾಣಿನಗರ ಇವರಿಂದ ಭಜನೆ, ರಾತ್ರಿ ಶ್ರೀ ದುರ್ಗಾಪರಮೇಶ್ವರೀ ಭಜನ ಸಂಘ ಮತ್ತು ಕುಣಿತ ಭಜನಾ ತಂಡ ಕಂಬಾರು ಪೆರ್ಮುದೆ ಇವರಿಂದ ಭಜನೆ ನಡೆಯಿತು. ರಾತ್ರಿ ಏತಡ್ಕ ಬಾಲಗೋಕುಲದ ಮಕ್ಕಳು, ಶ್ರೀ ರಕ್ತೇಶ್ವರೀ ಕಲಾಸಂಘ ಏತಡ್ಕ ಮತ್ತು ಊರಿನ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಪ್ರಾತಃಕಾಲ 2 ಕ್ಕೆ ಶ್ರೀದೈವದ ಕೋಲ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

.jpg)
.jpg)
