HEALTH TIPS

ಅಂತಃಶಕ್ತಿಯನ್ನು ಉದ್ಧೀಪನಗೊಳಿಸಲು ಯೋಗ ಸಹಕಾರಿ : ಸಾಧ್ವಿ ಶ್ರೀ ಮಾತಾನಂದಮಯಿ: ಯೋಗ ಪೋರ್ ಕಿಡ್ಸ್ ನಲ್ಲಿ ಆಶೀರ್ವಚನ


            ಕಾಸರಗೋಡು: ಆಧುನಿಕ ಸಮಾಜದಲ್ಲಿ ವಿಕೃತ ಮನೋಭಾವಗಳು ವಿಚಾರವಂತ ಸಮಾಜದ ನಿರ್ಮಾಣಕ್ಕೆ ಅಡ್ಡಿಯಾಗುತ್ತಿವೆ. ಅದನ್ನು ತಡೆದು ವಿಕೃತಿ ನೀಗಿ ಮನಸ್ಸಿಗೆ ಉತ್ತಮ ಚಿಂತನೆಗಳನ್ನು ತುಂಬಿ ಆಂತರಿಕ ಶಕ್ತಿಯನ್ನು ಉದ್ಧೀಪನಗೊಳಿಸಲು ಯೋಗ ಅತೀ ಅಗತ್ಯ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಅವರು ನುಡಿದರು.
         ಅವರು ಕಾಸರಗೋಡು ವನಿತಾ ಭವನ ನಗರಸಭಾ ಸಭಾಂಗಣದಲ್ಲಿ ಜರಗಿದ ‘ಯೋಗ ಪೋರ್ ಕಿಡ್ಸ್’ ಕರಂದಕ್ಕಾಡು ಕಾಸರಗೋಡು ಇದರ ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ  ಆಶೀರ್ವಚನ ನೀಡಿದರು.
           ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಕಾರ್ಯಕ್ರಮ ಉದ್ಘಾಟಿಸಿ ಯೋಗ ಪೋರ್ ಕಿಡ್ಸ್ ನ ಮಹತ್ವವನ್ನು ಅಲ್ಲಿನ ವಿದ್ಯಾರ್ಥಿಗಳ ಸಾಧನೆಯೇ ಹೇಳುತ್ತಿದೆ. ಗಡಿನಾಡಿನ ಈ ಸಂಸ್ಥೆಯು ರಾಜ್ಯದ ರಾಜಧಾನಿಯಲ್ಲೂ ಕಾರ್ಯಕ್ರಮ ನೀಡಿ ಮಂತ್ರಿ ಮಹನೀಯರನ್ನು ಬೆರಗಾಗಿಸಿದೆ ಎಂದರು.
             ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಧು ಗ್ರೂಪ್ ಮಂಗಳೂರು ಇದರ ನಿರ್ದೇಶಕ ಮಧುಸೂದನ ಆಯರ್ ಯಾಂತ್ರಿಕ ಬದುಕಿಗೆ ವಾಸ್ತವಿಕ ಪ್ರಜ್ಞೆ ಮೂಡಿಸುವಲ್ಲಿ ಯೋಗಾಭ್ಯಾಸ ಆರೋಗ್ಯಪೂರ್ಣ ಹವ್ಯಾಸ ಎಂದರು. ಗಡಿನಾಡಿನಲ್ಲಿ ಕನ್ನಡದ ಜೀವಂತಿಕೆ ಅಚ್ಚರಿ ಹಾಗೂ ಆನಂದ ನೀಡಿದೆ. ಸುದೃಢ ಯುವ ಜನಾಂಗದ ನಿರ್ಮಾಣ ಕಾರ್ಯದಲ್ಲಿ ಯೋಗ ಫೆÇೀರ್ ಕಿಡ್ಸ್ ಮಹತ್ವದ ಪಾತ್ರ ವಹಿಸುತ್ತಿದೆ. ಈ ಶ್ರಮದ ಸಾಧನೆಗೆ ತನ್ನ ಬೆಂಬಲ ಸದಾ ಇದೆ ಎಂದು ಪೆÇ್ರೀತ್ಸಾಹದ ಮಾತುಗಳನ್ನಾಡಿದರು.
           ಮುಖ್ಯ ಅತಿಥಿ ಸುದ್ಧಿ ಚಾನಲ್ ಸುಳ್ಯ ಇದರ ಮುಖ್ಯಸ್ಥರಾಗಿರುವ ದುರ್ಗಾ ಕುಮಾರ್ ನಾಯರ್ ಕೆರೆ ಮಾತನಾಡಿ, ಸಾಧನೆಗೆ ಅಡ್ಡದಾರಿಯಿಲ್ಲ.  ಪರಿಶ್ರಮವೊಂದೇ ಸೂಕ್ತ ಪ್ರತಪಲ ನೀಡುವುದು. ನಮ್ಮನ್ನು ಮುನ್ನಡೆಸುವ  ಒಳಗಿನ ಶಕ್ತಿಯನ್ನು ಬಲಪಡಿಸಿ  ಸುಸಂಸ್ಕøತ ಬದುಕು ಸಾಗಿಸಲು ಯೋಗ ಅತ್ಯಂತ ಸೂಕ್ತ ದಾರಿ ಎಂದರು. ಮಕ್ಕಳ ಆಸಕ್ತಿಯನ್ನು ಪಕ್ವಗೊಳಿಸಿ ಅದು ಅವರ ಬದುಕಿಗೆ ನೆರಳಾಗುವಂತೆ ಮಾಡುವ ಕರ್ತವ್ಯ ಹೆತ್ತವರದ್ದು ಎಂದರು.
            ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಸುನಿತ್ ಕುಮಾರ್.ಡಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಜಗನ್ನಾಥ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಕರಾಟೆಯಲ್ಲಿ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಸಂಸ್ಥೆಯ ವಿದ್ಯಾರ್ಥಿಗಳಾದ ಘನಶ್ಯಾಮ.ಎನ್ ಹಾಗೂ ಗಹನಾ ಚಂದ್ರನ್ ಇವರನ್ನು ಅಭಿನಂದಿಸಲಾಯಿತು.
           ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನ್ವಿತಾ ಕಾಮತ್ ಕಾಸರಗೋಡು ಇವರ ಭಕ್ತಿ ಗಾನಾರ್ಚನೆ-ಭಕ್ತಿಗೀತೆಗಳ ಗಾಯನ, ಶ್ರೀ ಲಕ್ಷ್ಮೀ ವೆಂಕಟೇಶ ವಿದ್ಯಾಲಯದ ವಿದ್ಯಾರ್ಥಿನಿ  ವೈಭವಿ ಇವರಿಂದ ಏಕಪಾತ್ರಾಭಿನಯ ಹಾಗೂ ಕೌಶಿಕ್.ಕೆ.ಯು ತಾಳಿಪಡ್ಪು ಕರೋಕೆ ಹಾಡುಗಳ ಮೂಲಕ ಜನಮನ ಸೂರೆಗೊಂಡರು.
           ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಯೋಗ ಶಿಕ್ಷಕಿ ತೇಜ ಕುಮಾರಿ ಸ್ವಾಗತಿಸಿ, ದಿವ್ಯ ಶರ್ಮ ಪಳ್ಳತ್ತಡ್ಕ ವಂದಿಸಿದರು.  ವಿದ್ಯಾಗಣೇಶ್ ಅಣಂಗೂರು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕುಮಾರ್ ಕರಂದೆಕ್ಕಾಡು ಸಹಕರಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries