ಉಪ್ಪಳ: ಉಪ್ಪಳ ಸಮೀಪದ ಐಲ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಬಿಂಬ ಪ್ರತಿಷ್ಠಾ ದಿನಾಚರಣೆ ಏ.4 ರಂದು ಹಾಗೂ ವಾರ್ಷಿಕ ವಿಷು ಜಾತ್ರೆ ಏ.14 ರಿಂದ 19ರ ವರೆಗೆ ನಡೆಯಲಿದೆ.
ಬಿಂಬ ಪ್ರತಿಷ್ಠಾ ದಿನಾಚರಣೆಯ ಅಂಗವಾಗಿ ಏ.7 ರಂದು ಬೆಳಿಗ್ಗೆ 7 ಕ್ಕೆ ನಿತ್ಯಪೂಜೆ, ಗಣಹೋಮ, 7.30ಕ್ಕೆ ನವಕ ಕಲಶ, ಚಂಡಿಕಾಯಾಗ ಪ್ರಾರಂಭ,9 ಕ್ಕೆ ನಾಗತಂಬಿಲ, 11.30ಕ್ಕೆ ಚಂಡಿಕಾಯಾಗ ಪೂರ್ಣಾಹುತಿ, ಮಧ್ಯಾಹ್ನ 12.30 ಕ್ಕೆ ಹೂವಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಕ್ಕೆ ಭಜನೆ, 6.30 ಕ್ಕೆ ದೀಪಾರಾಧನೆ, ರಾತ್ರಿ 7ಕ್ಕೆ ಶಾಸ್ತಾರ ದೇವರಿಗೆ ರಂಗಪೂಜೆ, ಭಜನೆ, 7.30 ಕ್ಕೆ ಹೂವಿನ ಪೂಜೆ, ಮಹಾಪೂಜೆ, ರಾತ್ರಿ 8.30 ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಏ.13 ರಿಂದ 19ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಷುಜಾತ್ರೆ ನಡೆಯಲಿದೆ.
ಐಲ ಕ್ಷೇತ್ರದ ಬಿಂಬ ಪ್ರತಿಷ್ಠಾ ದಿನಾಚರಣೆ-ವಿಷು ಜಾತ್ರೆ
0
ಮಾರ್ಚ್ 06, 2023
Tags





