ಮಂಜೇಶ್ವರ: ಉಡುಪಿ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಮಂಜೇಶ್ವರ ಕಣ್ವತೀರ್ಥ ಶ್ರೀ ರಾಮಾಂಜನೇಯ ಕ್ಷೇತ್ರದ ಸುತ್ತು ಪೌಳಿಯ ಜೀರ್ಣೋದ್ಧಾರದ ಕಾರ್ಯ ನಡೆಯುತ್ತಿದ್ದು ಚಿತ್ರಾಪುರ ಮಠದ ಶ್ರೀವಿಧ್ಯೇಂದ್ರ ತೀರ್ಥ ಸ್ವಾಮೀಜಿಯವರು ಶಾಸ್ತ್ರ ಕ್ರಮವಾಗಿ ಚಾಲನೆಯನ್ನು ನೀಡಿದರು. ಅವರಿಗೆ ಫಲ ಪುಷ್ಪಗಳನ್ನು ಸಮರ್ಪಿಸಿ ಪೇಜಾವರ ಮಠದ ರಘುರಾಮ ಆಚಾರ್ಯರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪೇಜಾವರ ಮಠದ ತಂತ್ರಿಗಳಾದ ಚಿತ್ರಾಪುರ ಶ್ರೀನಿವಾಸ ಆಚಾರ್ಯ, ಪುರೋಹಿತ ಸುಬ್ರಹ್ಮಣ್ಯ ಮೂಡಿತ್ತಾಯ, ಪೇಜಾವರ ಮಠದ ದಿವಾನ ಸುಬ್ರಹ್ಮಣ್ಯ ಭಟ್, ಪ್ರಬಂಧಕ ಇಂದುಶೇಖರ್ ಭಟ್, ಕಣ್ವತೀರ್ಥ ಕ್ಷೇತ್ರದ ಅರ್ಚಕ ರಮೇಶ್ ಉಪಾಧ್ಯಾಯ, ಕೃಷ್ಣ ಭಟ್ ಕಣ್ವತೀರ್ಥ, ಬ್ರಹ್ಮೇಶ್ವರ ದೇವಸ್ಥಾನದ ಅರ್ಚಕ ಗಿರೀಶ್ ಭಟ್ ಉಪಸ್ಥಿತರಿದ್ದರು.
ಈ ಸಂದರ್ಭ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ನಿರ್ವಹಣಾ ಹೊಣೆಯನ್ನು ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ನೆತ್ಯ ಇವರಿಗೆ ಒಪ್ಪಿಸಿದರು. ಕ್ಷೇತ್ರದ ಭಕ್ತರು, ಗ್ರಾಮಸ್ಥರು, ಸಂಘ ಸಂಸ್ಥೆ ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಣ್ವತೀರ್ಥದಲ್ಲಿ ಸುತ್ತುಪೌಳಿ ಜೀರ್ಣೋದ್ದಾರ:ಚಿತ್ರಾಪುರ ಶ್ರೀಗಳಿಂದ ಚಾಲನೆ
0
ಮಾರ್ಚ್ 13, 2023




.jpg)
