ತಿರುವನಂತಪುರ: ಪ್ರತಿಪಕ್ಷಗಳನ್ನು ಬಾಳೆಹಣ್ಣು ಎಂದು ಕರೆದ ಸಚಿವ ಮೊಹಮ್ಮದ್ ರಿಯಾಜ್‍ಗೆ ಬೀದಿ ಪುಂಡರ ಬೆನ್ನೆಲುಬು ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಹೇಳಿದ್ದಾರೆ.
ಇಂದು ಕಮ್ಯುನಿಸ್ಟ್ ನಾಯಕ ಆರ್.ಸುಗತನ್ ಬದುಕಿದ್ದರೆ, ಸೆಕ್ರೆಟರಿಯೇಟ್ ಬದಲಿಗೆ ವಿಧಾನಸಭೆ ಕಟ್ಟಡವನ್ನು ಕೆಡವಿ ಅಲ್ಲಿ ಹುಲ್ಲು ಬೆಳೆಸಬೇಕು ಎಂದು ಹೇಳುತ್ತಿದ್ದರು ಎಮದು ಸುಧಾಕರನ್ ತಿಳಿಸಿರುವರು.
ಪ್ರಜಾಸತ್ತಾತ್ಮಕ ಹಕ್ಕುಗಳನ್ನು ತುಳಿಯುವ ಮತ್ತು ವಿರೋಧ ಪಕ್ಷದ ಸದಸ್ಯರನ್ನು ಥಳಿಸುವ ಭಯೋತ್ಪಾದಕರಿಗೆ ಕೇರಳ ವಿಧಾನಸಭೆಯು ಸ್ವರ್ಗವಾಗಿದೆ. ಸದ್ಯ ಶಾಸಕಾಂಗ ಶಿಥಿಲಾವಸ್ಥೆಯಲ್ಲಿದೆ. ದಿನಕ್ಕೆ ಎಂಟರಿಂದ ಹತ್ತು ನಿಮಿಷಗಳ ಕಾಲ ಶಾಸಕಾಂಗ ಸಭೆಗೆ 36,28,594 ರೂ.ವೆಚ್ಚ ಮಾಡಲಾಗುತ್ತಿದೆ.
ಸಭಾ ಟಿವಿ ಈಗ ಕಮ್ಯುನಿಸ್ಟ್ ಪಕ್ಷದ ಚಾನೆಲ್‍ನಂತೆ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಆಡಳಿತ ಪಕ್ಷದ ಸದಸ್ಯರ ಮುಖ ಮತ್ತು ಭಾಷಣಗಳನ್ನು ಮಾತ್ರ ತೋರಿಸಲಾಗಿದೆ. ಪಿಣರಾಯಿ ಅವರ ಪೆÇಲೀಸರು ತಾವು ರಾಜಭಕ್ತರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಸುಧಾಕರನ್ ಹೇಳಿದ್ದಾರೆ.
ಕೇರಳ ವಿಧಾನಸಭೆ ಅಪವಿತ್ರವಾಗುತ್ತಿದೆ: ಸಚಿವ ಮುಹಮ್ಮದ್ ರಿಯಾಜ್ ಬೆನ್ನೆಲುಬು ಬೀದಿ ದರೋಡೆಕೋರರದ್ದು: ಕೆ.ಸುಧಾಕರನ್
0
ಮಾರ್ಚ್ 17, 2023





