ಮಂಜೇಶ್ವರ: ಕಣ್ವತೀರ್ಥ ಶ್ರೀ ರಾಮಾಂಜನೇಯ ಕ್ಷೇತ್ರದಲ್ಲಿ ಅಕ್ಷಯ ತೃತೀಯ ದಿನದಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಗಮಿಸಿ ವಿಶೇಷಪೂಜೆ ಸಲ್ಲಿಸಿ, ಭಕ್ತರಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಸುಧಾಕರ ರಾವ್ ಪೇಜಾವರ, ಗೋಪಾಲ ಶೆಟ್ಟಿ ಅರಿಬೈಲು, ಸ್ಫೂರ್ತಿ ವಿದ್ಯಾಸಂಸ್ಥೆಯ ಮಧುಸೂದನ ಬಳ್ಳಕ್ಕುರಾಯ, ಅರ್ಚಕ ರಮೇಶ್ ಉಪಾಧ್ಯಾಯ, ಗಿರೀಶ್ ಭಟ್ ಮತ್ತು ಭಕ್ತರು ಉಪಸ್ಥಿತರಿದ್ದರು. ಈ ಸಂದರ್ಭ ಅನ್ನಸಂತರ್ಪಣೆ ನಡೆಯಿತು.




.jpg)
