ಕುಂಬಳೆ: ಕಣ್ಣೂರು ನವಪುರ ದೇವಾಲಯದ ಚೆರುಶ್ಚೇರಿ ಕಲ|ಆ ಸಾಹಿತ್ಯ ಸಭಾದ ಆಶ್ರಯದಲ್ಲಿ ದ್ರಾವಿಡ ಭಾಷಾ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ಬಹುಭಾಷಾ ಕವಿಗೋಷ್ಠಿ, ನೂತನ ಕೃತಿಗಳ ಬಿಡುಗಡೆ ನೆರವೇರಿತು.
ಭಾಷಾಂತರ ತಜ್ಞ ಪಯ್ಯನ್ನೂರು ಕುಂಞÂ್ಞ ರಾಮನ್ ಅವರು ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮತ್ತು ರವೀಂದ್ರನ್ ಪಾಡಿಯವರಿಗೆ ಪುರಸ್ಕಾರ ಪ್ರದಾನ ಮಾಡಿದರು. ನವಪುರ ದೇವಾಲಯದ ಸ್ಥಾಪಕ, ಖ್ಯಾತ ಸಾಹಿತಿ ಪ್ರೊಪಯಿಲ್ ನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು.
ಬಹುಭಾಷಾ ಕವಿಗೋಷ್ಠಿಯಲ್ಲಿ ಸುಂದರ ಬಾರಡ್ಕ, ಆಲೀಸ್ ಥೋಮಸ್, ಸುಜಾತಾ ಬಾಲಕೃಷ್ಣನ್, ವನಜಾಕ್ಷಿ ಚೆಂಬ್ರಕಾನ, ರಾಜನ್ ಮುನಿಯೂರ್, ಎ|ಂ.ಬಾಲಕೃಷ್ಣನ್, ಕುಞÂಪ್ಪನ್ ತೃಕ್ಕರಿಪುರ, ಸುಜಾತಾ ಮಾಣಿಮೂಲೆ, ಚಂದ್ರಕಲಾ ನೀರಾಳ, ಸಂತೋಷ್ ಒಯಿಞವಳಪ್ಪ್, ರವೀಂದ್ರನ್ ಪಾಡಿ ಸ್ವರರಚಿತ ಕವನಗಳ|ನ್ನು ವಾಚಿಸಿದರು. ಈ ಸಂದರ್ಭ ಕೃತಿ ಬಿಡುಗಡೆ, ಕೃತಿಪರಿಚಯ, ಸಂವಾದಗಳು ನಡೆಯಿತು. ಸಾ|ಂಸ್ಕøತಿಕ ಕಾರ್ಯಕ್ರಮದಲ್ಲಿ ಜಾನಪದ, ಶಾಸ್ತ್ರೀಯ ನೃತ್ಯಗಳು ನಡೆಯಿತು.




.jpg)
