ಬದಿಯಡ್ಕ ವಿಷ್ಣುಮೂರ್ತಿ ಸೇವಾ ಸಮಿತಿಯ ಆಶ್ರಯದಲ್ಲಿ ಮೂರು ವರ್ಷಕೊಮ್ಮೆ ನಡೆಯುವ ಒತ್ತೆಕೋಲ ಕೆಂಡಸೇವೆ ವಿವಿಧ ವೈದಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ವಳಮಲೆ ಜನನದ ವಿಷ್ಣುಮೂರ್ತಿ ದೇವಸ್ಥಾನದಿಂದ ಭಂಡಾರ ಆಗಮಿಸಿ ಬೋಲ್ಕಟ್ಟೆ ಪರಿಸರದಲ್ಲಿ ವಿಷ್ಣುಮೂರ್ತಿ ದೈವದ ಕುಳಿಚಾಟ, ಅನ್ನದಾನ ಪ್ರಾಥಕಾಲ ಕೆಂಡಸೇವೆ ಅರಸಿನ ಹುಡಿ ಪ್ರಸಾದೊಂದಿಗೆ ಸಂಪನ್ನಗೊಂಡಿತು.
ಸೇವಾ ಸಮಿತಿ ಅಧ್ಯಕ್ಷ ತಿರುಪತಿಕುಮಾರ್ ಭಟ್, ಉಪಾಧ್ಯಕ್ಷರಾದ ಪಿ.ಜಿ. ಚಂದ್ರಹಾಸ ರೈ, ಜಗನ್ನಾಥ ರೈ ಕೋರೆಕ್ಕಾನ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ವಳಮಲೆ, ಕೋಶಾಧಿಕಾರಿ ಪಿ.ಜಿ. ಜಗನ್ನಾಥ ರೈ, ಪದಾಧಿಕಾರಿಗಳಾದ ನಿರಂಜನ ರೈ ಪೆರಡಾಲ, ಅಶೋಕ ರೈ ಕೊರೆಕ್ಕಾನ, ರಾಮ ಮುರಿಯಂಕೂಡ್ಲು, ವಿಜಯಸಾಯಿ, ಗಿರೀಶ್ ರೈ, ಭಾಸ್ಕರ ಬದಿಯಡ್ಕ, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು. ಸಾಂಸ್ಕøತಿಕ ಕಾರ್ಯಕ್ರಮದ ಭಾಗವಾಗಿ ಸ್ಥಳೀಯ ವಿದ್ಯಾರ್ಥಿ ಪ್ರತಿಭೆಗಳಿಂದ ನೃತ್ಯ ವೈಭವ, ರಂಗಸಿರಿ ಸಾಂಸ್ಕೃತಿಕ ವೇದಿಕೆ ತಂಡದಿಂದ ಯಕ್ಷಗಾನ ಬಯಲಾಟ, ಗಡಿನಾಡ ಸಾಹಿತ್ಯ ಸಂಭ್ರಮ ನಡೆಯಿತು.




.jpg)
.jpg)
