ಪೆರ್ಲ: ಭಾರತೀಯ ಜನತಾ ಪಕ್ಷ ಎಣ್ಮಕಜೆ ಪಂಚಾಯತ್ ಸಮಿತಿ ವತಿಯಿಂದ ಮಹಿಳಾ ಸಮಾವೇಶ ಪಕ್ಷದ ಕಛೇರಿಯಲ್ಲಿ ನಡೆಯಿತು. ಬಿ.ಜೆ.ಪಿ. ರಾಜ್ಯ ಸಮಿತಿ ಕಾರ್ಯದರ್ಶಿ, ವಕೀಲ ಪ್ರಕಾಶ್ ಬಾಬು ಸಮಾರಂಭ ಉದ್ಘಾಟಿಸಿದರು.
ಭಾರತೀಯ ಜನತಾ ಪಕ್ಷ ಎಣ್ಮಕಜೆ ಪಂಚಾಯತ್ ಸಮಿತಿ ಅಧ್ಯಕ್ಷ ಸುಮಿತ್ ರಾಜ್ ಎ. ಸಿ. ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕುಂಬಳೆ ಮಂಡಲ ಸಮಿತಿ ಅಧ್ಯಕ್ಷ ಸುನಿಲ್ ಅನಂತಪುರ, ಜಿಲ್ಲಾ ಸಮಿತಿ ಕಾರ್ಯದರ್ಶಿ ಪುಷ್ಪ ಅಮೆಕ್ಕಳ, ಮಂಡಲ ಮಹಿಳಾಮೋರ್ಚ ಅಧ್ಯಕ್ಷೆ ಉಷಾ ಗಣೇಶ್, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣನಾಯ್ಕ್ ಅಡ್ಕಸ್ಥಳ, ಗ್ರಾಮ ಪಂಚಾಯಿತಿ ಸದಸ್ಯರಾದ ಇಂದಿರಾ. ಎಚ್, ಆಶಾಲತಾ ನಲ್ಕ, ಮಹೇಶ್ ಭಟ್, ನೇತಾರೆ ಸವಿತಾ ಬಾಳಿಕೆ, ಎಣ್ಮಕಜೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮಮತಾ ರೈ, ಲಲಿತಾ ಕೇಶವ್ ಖಂಡಿಗೆ, ಮತ್ತು ವಿವಿಧ ವಾರ್ಡ್ ಗಳಿಂದ ಪಕ್ಷದ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು.





