ಕಾಸರಗೋಡು: ಉದ್ಯೋಗ ವಿನಿಮಯ ಕೇಂದ್ರದಲ್ಲಿ 2022 ಜ.1ರಿಂದ 2022 ಅ.31ರ ವರೆಗೆ(ಅಕ್ಟೋಬರ್ 1999 ರಿಂದ ಆಗಸ್ಟ್ 2022 ರವರೆಗೆ ನೋಂದಣಿ Iಆ ಕಾರ್ಡ್ ಅನ್ನು ನವೀಕರಿಸಬೇಕಾದವರಿಗೆ)ತಮ್ಮ ನೋಂದಾವಣೆಯನ್ನು ಕಾನೂನುಬದ್ಧವಾಗಿ ನವೀಕರಿಸಲು ಸಾಧ್ಯವಾಗದೆ, ಹಿರಿತನ ಕಳೆದುಕೊಂಡಿರುವ ಅಭ್ಯರ್ಥಿಗಳಿಗೆ ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಹೊಸದುರ್ಗ ನಗರ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ತಮ್ಮ ಹಿರಿತನವನ್ನು ಕಾಯ್ದುಕೊಳ್ಳುವ ಮೂಲಕ ತಮ್ಮ ನೋಂದಣಿಯನ್ನು ಮೇ 31 ರವರೆಗೆ ನವೀಕರಿಸಲು ಅವಕಾಶ ಕಲ್ಪಿಸಲಾಗಿದೆ.
ಉದ್ಯೋಗ ಕಾರ್ಡ್, ಮೆಸೆಂಜರ್ ಅಥವಾ ಆನ್‍ಲೈನ್ ಇ-ಪೆÇೀರ್ಟಲ್ ಮೂಲಕ ವೈಯಕ್ತಿಕವಾಗಿ ನೋಂದಣಿ ನವೀಕರಿಸಬಹುದು. ನೌಕರಿ ಸಿಕ್ಕ ನಂತರ ಸಕಾಲದಲ್ಲಿ ಪ್ರಮಾಣ ಪತ್ರ ಲಗತ್ತಿಸದೇ ಇರುವವರು ಹಾಗೂ ಸಕಾಲದಲ್ಲಿ ಲಗತ್ತಿಸದ ಕಾರಣ ಹಿರಿತನ ಕಳೆದುಕೊಂಡವರು ಅರ್ಜಿ ಸಲ್ಲಿಸಬಹುದು. ಶಿಕ್ಷೆ ರೂಪದಲ್ಲಿ ಸೀನಿಯಾರಿಟಿ ಕಳೆದುಕೊಂಡವರಿಗೆ ನವೀಕರಿಸಲು ಅವಕಾಶವಿರುವುದಿಲ್ಲ. ವೆಬ್‍ಸೈಟ್ ತಿತಿತಿ.eemಠಿಟoಥಿmeಟಿಣ.ಞeಡಿಚಿಟಚಿ.gov. ದೂರವಾಣಿ 04994 255582, 0467 2209068.





