ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಚಿತ್ರಕಲೆ, ಸಂಗೀತ, ವಿದ್ಯಾರ್ಜನೆ, ಕ್ಷೇತ್ರಗಳಲ್ಲಿ ಹಾಗೂ ಬಹುಮುಖ ಪ್ರತಿಭೆಗಳಾದ ತನ್ಮಯೀ ವರುಣ್ ಕೀಕಾನ ಬೆಂಗಳೂರು ಮತ್ತು ಸಿಂಚನ ಎಚ್ ಕುಂಬಳೆ ಇವರಿಗೆ ಕನ್ನಡ ಭವನದ ಬಾಲ ಪ್ರತಿಭಾ ಪುರಸ್ಕಾರವಾದ "ಭರವಸೆಯ ಬೆಳಕು "2023 ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಜಿಲ್ಲಾ ಅಧ್ಯಕ್ಷರಾದ ಕಮಲಾಕ್ಷ ಕಲ್ಲುಗದ್ದೆಅದ್ಯಕ್ಷತೆ ವಹಿಸಿದ್ದರು. ಯು ಎ ಇ ಯ ಸಂಸ್ಥೆ ಮಾರ್ಗದೀಪ ಸಾಂಸ್ಕøತಿಕ ಸಂಘ ದ ಅಧ್ಯಕ್ಷ ಅಜಿತ್ ಕೊರಕೋಡು ಮುಖ್ಯ ಅಥಿತಿಗಳಾಗಿಭಾಗವಹಿಸಿದ್ದರು. ಕಾರ್ಯದರ್ಶಿ ಮಹೇಶ್ ಚಂದ್ರಗಿರಿ, ದನುಂಜಯ್ ಸಿ ಎಚ್ ನಾಗರಕಟ್ಟೆ ಅವರ ಉಪಸ್ಥಿತಿಯಲ್ಲಿ ಕನ್ನಡ ಭವನ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಪ್ರಶಸ್ತಿ ನೀಡಿ ಗೌರವಿಸಿದರು. ಕನ್ನಡ ಭವನ ಗ್ರಂಥಾಲಯ ಸಂಚಾಲಕಿ ಸಂಧ್ಯಾರಾಣಿ ಟೀಚರ್ ಸ್ಮರಣಿಕೆ ನೀಡಿದರು ಅಜಿತ್ ಕೊರಕೋಡು ಪುಸ್ತಕ, ಹಾರ ನೀಡಿ ಪುರಸ್ಕರಿಸಿದರು. ಕನ್ನಡ ಭವನ ಕಾರ್ಯದರ್ಶಿ ವಸಂತ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾರಾಣಿ ಟೀಚರ್ ಧನ್ಯವಾದವಿತ್ತರು.





