ಕಾಸರಗೋಡು: ಕೋಟೆಯವರ ಯಾನೆ ಕೋಟೆಗಾರರ ಸೇವಾಸಂಘದ ಯುವಕ ಹಾಗು ಮಹಿಳಾ ಸಂಘದ ನೇತೃತ್ವದಲ್ಲಿ ಕೋಟೆಯಾರ್ ಮಹಾ ಸಮಾವೇಶ ನಾಗರಕಟ್ಟೆಯ ಶ್ರೀ ಬಿಕ್ಷುಲಕ್ಷ್ಮಣಾನಂದ ಕಲಾಮಂದಿರದಲ್ಲಿ ಜರಗಿತು.
ಸಂಘದ ಅಧ್ಯಕ್ಷ ವಿಶ್ವನಾಥ ಕೋಟೆಕಣಿ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿದರು, ಜಯಪ್ರಕಾಶ್ ಕುಂಬಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ರಂಜಿತಾ ಮೋºನ್‍ದಾಸ್, ಪವಿತ್ರಾಸಂತೋಷ್, ಸುಕನ್ಯ, ಚಂದ್ರಹಾಸ ನಾಗರಕಟ್ಟೆ, ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು. ಕಾರ್ಯದರ್ಶಿ ಪಾಂಡುರಂಗ ವಿದ್ಯಾನಗರ, ಕೋಶಾದಿಕಾರಿ ದಿವಾಕರ ಮೀಪುಗುರಿ, ಮಹಿಳಾ ಸಂಘದ ಅಧ್ಯಕ್ಷೆ ಗೀತಾಪ್ರಶಾಂತ್, ಕಾರ್ಯದರ್ಶಿ ವಿಜಯಲಕ್ಷ್ಮಿ, ಪಾಂಡುರಂಗ ಯುವಕಸಂಘದ ಅಧ್ಯಕ್ಷ ಮುರಳಿ ಪಾರಕಟ್ಟ, ಕಾರ್ಯದರ್ಶಿಮೋºನ್ ರಾಜ್ ಮೀಪುಗುರಿ ಉಪಸ್ಥಿತರಿದ್ದರು. ಉತ್ತಮ ಸಾಮಾಜಿಕ ಸೇವೆಗಾಗಿ ಕಮಲಾಕ್ಷ ತಲ್ಲಾಣಿ, ಮುರಳಿಪಾರಕಟ್ಟ, ಶಾಮ ಬಾರಿಕ್ಕಾಡು, ಸುನಿಲ್ ಮಜೂರು, ಮೋಹನ್‍ದಾಸ್‍ಕೊರಕೋಡು ಇವರನ್ನು ಸಂಘದವತಿಯಿಂದ ಸೇವಾ ರಸ್ಕಾರ ನೀಡಿ ಗೌರವಿಸಲಾಯಿತು, ಸ್ವಸಮಾಜದ ಕೊಡುಗೈದಾನಿಗಳ ನೆರವಿನಿಂದ ಸಂಘದನೇತೃತ್ವದಲ್ಲಿ ಸ್ಪಂದನ ಎಂಬ ಯೋಜನೆಯನ್ನುಕೈಗೆತ್ತಿಕೊಳ್ಳಲಾಯಿತು, ಈ ಯೋಜನೆಯ ಮೂಲಕ ಅರ್ಥಿಕವಾಗಿ ಹಿಂದುಳಿದ ಮೂರು ಮಂದಿ ವಿದ್ಯಾರ್ಥಿಗಳ ಎಸ್‍ಎಸ್‍ಎಲ್ ಸಿ ತನಕದ ವಿದ್ಯಾಭ್ಯಾಸದ ಖರ್ಚವೆಚ್ಚಗಳನು ನಿಭಾಯಿಸಲು ತೀರ್ಮಾನಿಸಲಾಯಿತು. ಅದರ ಆರಂಭಘಟ್ಟದಲ್ಲಿ ಈ ಮೂರು ಮಕ್ಕಳಿಗೆ ಶಾಲಾಬ್ಯಾಘ್ ಹಾಗು ಪೂರ್ತಿ ಕಲಿಕಾ ಸಾಮಗ್ರಿ ಸಹಿತಪುಸ್ತಕಗಳನ್ನು ವಿತರಿಸಲಾಯಿತು. ಇತ್ತೀಚೆಗೆ ಜರುಗಿದ ಉಚಿತ ನೇತ್ರತಪಾಸಣೆಯಲ್ಲಿ ಭಾಗವಹಿಸಿ ಕನ್ನಡಕದ ಅಗತ್ಯವಿದ್ದ 149 ಮಂದಿಗೆ ಕನ್ನಡಕವನ್ನು ಉಚಿತವಗಿ ವಿತರಿಸಲಾಯಿತು,ಮಹಾಸಮಾವೇಶದ ಅಂಗವಾಗಿ ಜರುಗಿದ ಕ್ರೀಡಾಕೂಟದವಿಜೇತರಿಗೆ ಬಹುಮಾನ ವಿತರಿಸಲಾಯಿತು. ತದನಂತರಸಮಾಜದ ಮಕ್ಕಳಿಂದ ಹಾಗೂ ಮಳೆಯರಿಂದ ಸಾಂಸ್ಕøತಿಕಕಾರ್ಯಕ್ರಮ ಜರಗಿತು. ದಿನೇಶ್‍ನಾಗರಕಟ್ಟೆ ಸ್ವಾಗತಿಸಿದರು. ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು,ಹರೀಶ್ ಅಣಂಗೂರು ವಂದಿಸಿದರು.





