ಕಾಸರಗೋಡು: ಪಾಲಿಯೇಟಿವ್ ದಾದಿಗೆ ಉದ್ಯೋಗ ನಿಷೇಧಿಸಲಾಗಿದೆ ಎಂದು ಆರೋಪಿಸಿ ಸಿಐಟಿಯು ಕಳೆದ ಐದು ದಿವಸಗಳಿಂದ ಪೆರ್ಲದ ಎಣ್ಮಕಜೆ ಪಂಚಾಯಿತಿ ಕಚೇರಿ ಎದುರು ನಡೆಸಿಕೊಂಡು ಬರಲಾಗುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ.
ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ನಡೆಸಿದ ಮಾತುಕತೆಯನ್ವಯ ಏ. 18 ಹಾಗೂ 19ರಂದು ಸೆಕ್ರೆಟೇರಿಯೆಟ್ ಎದುರು ಚಳವಳಿ ನಡೆಸಲು ತೀರ್ಮಾಣಿಸಿರುವ ಹಿನ್ನೆಲೆಯಲ್ಲಿ ಸಿಐಟಿಯು ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದುಬರುತ್ತಿದ್ದ ದರಣಿಯನ್ನು ನಿಲುಗಡೆಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಅಬ್ರಹಾಂ ತಿಳಿಸಿದ್ದಾರೆ.
ಈ ಹಿಂದೆ ಪಾಲಿಯೇಟಿವ್ ಕೇರ್‍ಗೆ ದಾದಿಯನ್ನು ತಾತ್ಕಾಲಿಕ ನೇಮಕಾತಿಯನ್ವಯ ಪಂಚಾಯಿತಿ ನೇಮಿಸಿದ್ದು, ಈ ದಾದಿ ವಿರುದ್ಧ ಪಂಚಾಯಿತಿ ಸದಸ್ಯರೂ ಸೇರಿದಂತೆ ನಾಗರಿಕರಿಂದ ವ್ಯಾಪಕ ದೂರು ಕೇಳಿ ಬಂದಿತ್ತು. ಈ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಲಾಗಿದ್ದರೂ, ಈ ದಾದಿ ವಿರುದ್ಧ ಮತ್ತೆ ಅದೇ ರೀತಿಯ ದೂರು ಲಭಿಸಿದ ಹಿನ್ನೆಲೆಯಲ್ಲಿ ಪಂಚಾಯಿತಿ ವೈದ್ಯಾಧಿಕಾರಿಯ ವರದಿ ಆಧಾರದಲ್ಲಿ ಈ ದಾದಿಯನ್ನು ಕೈಬಿಡಲಾಗಿತ್ತು. ಜೂನ್ ತಿಂಗಳಲ್ಲಿ ಆಡಳಿತ ಸಮಿತಿ ಸಭೆಯಲ್ಲಿ ಚರ್ಚಿಸಿ ಹೊಸದಾಗಿ ಅರ್ಜಿ ಸ್ವೀಕರಿಸಿ ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಹೊಸ ನೇಮಕಾತಿ ನಡೆಸಲಾಗಿದೆ. ಇದರ ವಿರುದ್ಧ ಸಿಐಟಿಯು ಚಳವಳಿ ನಡೆಸಿರುವುದು ಕಾನೂನುಬಾಹಿರ ಎಂದು ಆಡಳಿತ ಸಮಿತಿ ಸ್ಪಷ್ಠಿಕರಣ ನೀಡಿದೆ.
ಪಾಲಿಯೇಟಿವ್ ದಾದಿಗೆ ಉದ್ಯೋಗ ನಿರಾಕರಣೆ: ಚಳವಳಿ ತಾತ್ಕಾಲಿಕವಾಗಿ ಕೈಬಿಟ್ಟ ಸಿಐಟಿಯು
0
ಏಪ್ರಿಲ್ 14, 2023
Tags

