HEALTH TIPS

ಹಿಂದೂ ಐಕ್ಯವೇದಿ ರಾಜ್ಯ ಸಮ್ಮೇಳನ; ಸ್ವಾಮಿ ಚಿದಾನಂದಪುರಿಯವರಿಂದ ನಾಳೆ ಹಿಂದೂ ನಾಯಕತ್ವ ಸಮಾವೇಶ ಉದ್ಘಾಟನೆ


             ತ್ರಿಶೂರ್: ಹಿಂದೂ ಐಕ್ಯವೇದಿ ರಾಜ್ಯ ಸಮ್ಮೇಳನ ನಾಳೆ ತ್ರಿಶೂರಿನಲ್ಲಿ ಆರಂಭವಾಗಲಿದೆ. ಮೂರು ದಿನಗಳ ಸಮಾವೇಶದಲ್ಲಿ ಹಲವು ರಾಷ್ಟ್ರ ಮತ್ತು ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.
         ನಾಳೆ ಬೆಳಗ್ಗೆ 10 ಕ್ಕೆ  ಹೋಟೆಲ್ ವೃಂದಾವನದಲ್ಲಿ ಹಿಂದೂ ನಾಯಕತ್ವ ಸಮ್ಮೇಳನವನ್ನು ಸ್ವಾಮಿ ಚಿದಾನಂದಪುರಿ ಉದ್ಘಾಟಿಸಲಿದ್ದಾರೆ. ಕೆ.ಪಿ. ಶಶಿಕಲಾ ಟೀಚರ್ ಅಧ್ಯಕ್ಷತೆ ವಹಿಸುವರು.
           ಹಿಂದೂ ಸಮಾಜದಲ್ಲಿ ಆರ್ಥಿಕ ಸಬಲೀಕರಣ ಎಂಬ ವಿಷಯದ ಬಗ್ಗೆ ಆರ್.ವಿ. ಬಾಬು, ಅಡ್ವ. ಎಸ್. ಜಯಸೂರ್ಯನ್ ಅವರು ಮಾತನಾಡಲಿದ್ದಾರೆ. ಜಂಟಿ ಸಂಘಟನಾ ಕಾರ್ಯದರ್ಶಿ ವಿ. ಸುಶಿಕುಮಾರ್ ಮುಂದಿನ ಕಾರ್ಯಕ್ರಮಗಳನ್ನು ವಿವರಿಸುವರು.
          8 ಕ್ಕೆ ಹಿಂದೂ ಜಾಗರಣ ಮಂಚ್ ದೇವಾಲಯ ಸಂಘಟನೆಯ ಕಾರ್ಯದರ್ಶಿ ಜಗದೀಶ್ ಕಾರಂತ್ ಎರಡನೇ ದಿನ ಸಮಾವೇಷ  ಉದ್ಘಾಟಿಸುವರು. ಹಿಂದೂ ಐಕ್ಯವೇದಿ ಕಾರ್ಯಾಧ್ಯಕ್ಷ ವತ್ಸನ್ ತಿಲ್ಲಂಗೇರಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಸಮಿತಿಗಳ ವರದಿಯನ್ನೂ ಮಂಡಿಸಲಾಗುವುದು. ಮಧ್ಯಾಹ್ನ ಆರ್‍ಎಸ್‍ಎಸ್ ಪ್ರಾಂತ ಸಹಕಾರ್ಯವಾಹ ಟಿ.ವಿ. ಪ್ರಸಾದಬಾಬು ಸಾಂಸ್ಥಿಕ ಚರ್ಚೆಗೆ ಚಾಲನೆ ನೀಡಲಿದ್ದಾರೆ. ಸಂಜೆ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಆರ್‍ಎಸ್‍ಎಸ್ ಪ್ರಾರ್ಥನಾ ಪ್ರಚಾರಕ ಎಸ್. ಸುದರ್ಶನನ್ ಸಮಾರೋಪ ಭಾಷಣ ಮಾಡಲಿದ್ದಾರೆ.
             ಆರೆಸ್ಸೆಸ್ ಅಖಿಲ ಭಾರತೀಯ ಕಾರ್ಯಕಾರಿ ಸದಸ್ಯ ರಾಮ್ ಮಾಧವ್ ಅವರು ಏಪ್ರಿಲ್ 9 ರಂದು ವಡಕ್ಕುನಾಥನ್ ದೇವಸ್ಥಾನದ ಮೈದಾನದಲ್ಲಿ ಸುಮಾರು 10,000 ಮಂದಿ ಭಾಗವಹಿಸುವ ಸಮ್ಮೇಳನವನ್ನು ಬೆಳಿಗ್ಗೆ 9.30 ಕ್ಕೆ ಉದ್ಘಾಟಿಸಲಿದ್ದಾರೆ. 11.30ಕ್ಕೆ ಆರ್‍ಎಸ್‍ಎಸ್ ದಕ್ಷಿಣಕ್ಷೇತ್ರ ಸಹಕಾರ್ಯವಾಹ ಎಂ. ರಾಧಾಕೃಷ್ಣನ್ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರೋಪದಲ್ಲಿ ಕುಮ್ಮನಂ ರಾಜಶೇಖರನ್ ಮಾತನಾಡಲಿದ್ದಾರೆ. ಸಂಜೆ 4 ಕ್ಕೆ ನಗರ ಪ್ರದರ್ಶನ ನಡೆಯಲಿದೆ. 5ರಂದು ಸಾಮಾನ್ಯ ಸಭೆ ಪ್ರಜ್ಞಾ ಪರ್ವಹಾರ ರಾಷ್ಟ್ರೀಯ ಸಮಯೋಜಕ ಜೆ. ನಂದಕುಮಾರ್ ಉದ್ಘಾಟಿಸುವರು. ಸ್ವಾಗತ ಸಮಿತಿ ಅಧ್ಯಕ್ಷ ಡಾ. ಕೆ.ಸಿ. ಪ್ರಕಾಶನ್ ಅಧ್ಯಕ್ಷತೆ ವಹಿಸುವರು.

              ಪ್ರತಿನಿಧಿಗಳಿಗೆ ತ್ರಿಶೂರಿನ ತಾಯಂದಿರು ಮನೆಯಲ್ಲಿ ತಯಾರಿಸಿದ ಸಿದ್ದ ಆಹಾರ ವಿತರಿಸುವರು. ಸಮ್ಮೇಳನದ ಪೂರ್ವಭಾವಿಯಾಗಿ ಐದು ದಿನಗಳ ಕಾಲ ನಡೆದ ಚರ್ಚೆಗಳು ಇಂದು ಮುಕ್ತಾಯಗೊಳ್ಳಲಿವೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries