ತಿರುವನಂತಪುರಂ: ಹಿರಿಯ ಕಾಂಗ್ರೆಸ್ ನಾಯಕ ಎ.ಕೆ. ಆ್ಯಂಟನಿ ಪುತ್ರ ಅನಿಲ್ ಆಂಟೋನಿ ಬಿಜೆಪಿ ಸೇರಿದ ಬಳಿಕ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಪುತ್ರ ಚಾಂಡಿ ಉಮ್ಮನ್ ಅವರು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಜೊತೆಗಿನ ಅನಿಲ್ ತೆಗೆದಿದ್ದ ಪೊಟೋವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
'ಟ್ರಾವೆಲ್ ಡೈಲಿ' ಎಂಬ ಶೀರ್ಷಿಕೆಯೊಂದಿಗೆ ಚಾಂಡಿ ಉಮ್ಮನ್ ಫೇಸ್ಬುಕ್ನಲ್ಲಿ ಪೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರ ಶೀಘ್ರದಲ್ಲೇ ವೈರಲ್ ಆಗಿ ಚರ್ಚೆಗೆ ಹುಟ್ಟುಹಾಕಿತು.
ಇದೇ ವೇಳೆ ಅನಿಲ್ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದು ನೋವಿನ ಸಂಗತಿ ಎಂದು ಅವರ ತಂದೆ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎ.ಕೆ. ಆಂಟನಿ ಪ್ರತಿಕ್ರಿಯಿಸಿದರು. ಅನಿಲ್ ಅವರ ನಿರ್ಧಾರ ಸಂಪೂರ್ಣ ತಪ್ಪು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಬಿಜೆಪಿ ಸೇರಿದ ಅನಿಲ್ ಆಂಟೋನಿ: ಉಮ್ಮನ್ ಚಾಂಡಿ ಜೊತೆಗಿನ ಚಿತ್ರವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡ ಚಾಂಡಿ ಉಮ್ಮನ್
0
April 06, 2023