ಮುಳ್ಳೇರಿಯ: ಬೆಳಕು ಜ್ಞಾನದ ಸಂಕೇತ. ಭಗವಂತನ ಪ್ರತೀಕ. ಜಗತ್ತಿನ ಅಂಧಕಾರಕ್ಕೆ ಭಗವಂತನ ಆರಾಧನೆಯ ಮೂಲಕ ಆಶೀರ್ವಾದದ ಹೊಸತನದ ಬೆಳಕು ಮಾತ್ರ ಶ್ರೀರಕ್ಷೆ ನೀಡಬಲ್ಲುದು. ಆದುದರಿಂದ ಲಕ್ಷ ದೀಪೋತ್ಸವ ಮೂಲಕ ಕ್ಷೇತ್ರ ಸಾನಿಧ್ಯ ಮಾತ್ರವಲ್ಲ ಈ ಊರೂ ಸಮೃದ್ಧವಾಗುವುದು ಎಂದು ಧಾರ್ಮಿಕ ಮುಖಂಡ, ಉದ್ಯಮಿ ಗಂಗಾಧರನ್ ನಾಯರ್ ಪಾಡಿ ಅಭಿಪ್ರಾಯಪಟ್ಟರು.
ಅವರು ನೆಕ್ರಾಜೆ ಸಂತಾನ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಮೇ 12ರಂದು ಜರಗುವ ಲಕ್ಷ ದೀಪೆÇೀತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವಿ. ಡಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು ಲಕ್ಷದೀಪೆÇೀತ್ಸವ ಸಮಿತಿಯ ಅಧ್ಯಕ್ಷ ನಿತ್ಯಾನಂದ ನಲ್ಲಿಸ್ಥಲ, ಗಣೇಶ್ ವತ್ಸ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದಿಯಡ್ಕ ವಲಯ ಮೇಲ್ವಿಚಾರಕ ದಿನೇಶ್ ಕೊಕ್ಕಡ, ಪ್ರವೀಣ್ ಶೆಟ್ಟಿ, ಜನಜಾಗೃತಿ ವೇದಿಕೆ ಬದಿಯಡ್ಕ ವಲಯ ಅಧ್ಯಕ್ಷ ಅಖಿಲೇಶ್ ನಗುಮುಗಂ ಹಾಗೂ ಕ್ಷೇತ್ರದ ವಿವಿಧ ಸಮಿತಿಯ ಸದಸ್ಯರುಗಳು ಊರ ಮಹನೀಯರು ಉಪಸ್ಥಿತರಿದ್ದರು.
ಲಕ್ಷದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
0
ಏಪ್ರಿಲ್ 18, 2023




.jpg)
