ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ 30ನೇ ವರ್ಷಾಚರಣೆ'ತ್ರಿಂಶತಿ ವರ್ಷಾಚರಣೆ' ಸಂದರ್ಭ ಕರ್ನಾಟಕ ಸಾಹಿತ್ಯ ಪರಿಷತ್‍ನ 109ನೇ ಸಂಸ್ಥಾಪನಾ ವಷಾಚರಣೆ ಕಾರ್ಯಕ್ರಮ ಕಾಸರಗೋಡು ಬ್ಯಾಂಕ್ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಜರುಗಿತು.
ಕತೆಗಾರ್ತಿ, ಸಮಾಜಸೇವಕಿ ಸ್ನೇಹಲತಾ ದಿವಾಕರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಭಾರತರತ್ನ ಎಂ. ವಿಶ್ವೇಶ್ವರಯ್ಯ, ಎಚ್ ನಂಜುಂಡಯ್ಯ ಅವರಂತಹ ಘಟಾನುಘಟಿಗಳ ಸರ್ವಪ್ರಯತ್ನದಿಂದ ರೂಪುಗೊಂಡ ಕರ್ನಾಟಕ ಸಾಹಿತ್ಯ ಪರಿಷತ್, ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಮಾತೃ ಸಂಸ್ಥೆಯಾಗಿದೆ. ಕಸಾಪದ ಕಾರ್ಯವೈಖರಿ ವಿಶ್ವ ವ್ಯಾಪಿಯಾದುದು ಎಂದು ತಿಳಿಸಿದರು.
ಪ್ರಾಂಶುಪಾಲ ಎನ್. ರಾಮಚಂದ್ರ ಭಟ್ಟ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ವಿ. ಭಟ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭ ನಿವೃತ್ತ ಅಧಿಕಾರಿ ಗಣೇಶಪ್ರಸಾದ ಸಂಗ್ರಹಿಸಿದ ಕೆಪಿಎಸ್‍ಸಿ ಗೈಡ್ ಎಸ್.ವಿ ಭಟ್ ಲೋಕಾರ್ಪಣೆ ಮಾಡಿದರು. ವಿ. ಹರಿಣಾಕ್ಷಿ, ಕ.ಸಾ.ಪ. ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಭಾವಗೀತೆ ಹಾಡಿದರು. ಗಣೇಶ ಪ್ರಸಾದ ಪಾಣೂರು ಕೃತಿಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಹಿರಿಯ ಕವಿ ರಾಧಾಕೃಷ್ಣಉಳಿಯತ್ತಡ್ಕ, ನಿ. ಪ್ರಾಂಶುಪಾಲ ಪಿ.ಎನ್. ಮೂಡಿತ್ತಾಯ, ಸಹಾಯಕಪ್ರಾಧ್ಯಾಪಿ ಕೆ. ಲಕ್ಷ್ಮೀ ಕೆ. , ರಘು ಮೀಪುಗುರಿ,ಸತೀಶ್ ಮಾಸ್ಟರ್ ಕೂಡ್ಲು, ನಾಗರಾಜ ಕೆ. ಸತೀಶ್ ಸಾಲಿಯಾನ್,ಪುನೀತ ಕೃಷ್ಣ, ರಾಧಾ ಮುರಳೀಧರ, ನಾರಾಯಣಮೂರ್ತಿ, ರಮೇಶ, ನೀತು, ರಂಜಿತ್, ಉಷಾರಾಣಿ, ಮೀನಾಕ್ಷಿ, ರಶ್ಮಿಎಸ್. ಎನ್. ಶ್ವೇತ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು. ಗೌ. ಕಾರ್ಯದರ್ಶಿಪ್ರದಿಪ್‍ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶೇಖರ ಶೆಟ್ಟಿನಿರೂಪಿಸಿ, ವಂದಿಸಿದರು.


