HEALTH TIPS

ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ 44 ನೇ ವಾರ್ಷಿಕೋತ್ಸವ

                ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ 44ನೇ ವಾರ್ಷಿಕೋತ್ಸವವು ತಂತ್ರಿವರ್ಯ ಡಾ.ವೇದಮೂರ್ತಿ ಬಳ್ಳಪದವು ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ಜರಗಿತು. ಬೆಳಗ್ಗೆ ಧ್ವಜಾರೋಹಣ, ಶುದ್ಧಿಕಲಶ, ಗಣಪತಿ ಹೋಮ, ಭಜನೆ, ಪೂಜೆ, ಚಪ್ಪರ ಮದುವೆ, ತುಳಸೀ ಹಾರ ನೇಯುವ ಸ್ಪರ್ಧೆ, ತುಲಾಭಾರ ಸೇವೆ ನಡೆಯಿತು.

      ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಬಾಲಗೋಕುಲ ಕಾಸರಗೋಡು ತಾಲೂಕು ಶಿಕ್ಷಣ ಪ್ರಮುಖ್ ದೇವದಾಸ್ ನುಳ್ಳಿಪ್ಪಾಡಿ ಧಾರ್ಮಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀಮಂದಿರದ ಕಾರ್ಯಾಧ್ಯಕ್ಷ ಮಧುಸೂದನ ಆಯರ್ ಮಂಗಳೂರು, ಅಖಿಲ ಕೇರಳ ಯಾದವ ಸಭಾ ರಾಜ್ಯಸಮಿತಿ ಪ್ರಧಾನ ಕಾರ್ಯದರ್ಶಿ, ಕೆ.ಎಂ.ದಾಮೋದರನ್, ಧಾರ್ಮಿಕ ಮುಂದಾಳು ಎಸ್.ಎನ್.ಮಯ್ಯ ಬದಿಯಡ್ಕ, ಪಾಂಚಜನ್ಯ ಬಾಲಗೋಕುಲದ ಪ್ರಮುಖ್ ನಟರಾಜ ಕಲ್ಲಕಳಂಬಿ, ಪ್ರೊ.ಎ.ಶ್ರೀನಾಥ್ ಉಪಸ್ಥಿತರಿದ್ದರು. ಗೌರವಾಧ್ಯಕ್ಷರುಗಳಾದ ಬಾಬು ಮಣಿಯಾಣಿ ಜಯನಗರ, ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು, ಅಗಲ್ಪಾಡಿ ಯಾದವ ಸೇವಾಸಂಘದ ಅಧ್ಯಕ್ಷ ಸುಧಾಮ ಪದ್ಮಾರು ಉಪಸ್ಥಿತರಿದ್ದರು. 

           ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರ್ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಸಾವಯವ ಕೃಷಿತಜ್ಞ, ವಿಶ್ರಾಂತ ದೈಹಿಕ ಶಿಕ್ಷಕ ನಾರಾಯಣ ಭಟ್ ಆನೆಪಳ್ಳ, ನಿವೃತ್ತ ಅಧ್ಯಾಪಿಕೆ, ಸಂಘಟಕಿ ವಸಂತಿ ಟೀಚರ್ ಅಗಲ್ಪಾಡಿ ಹಾಗೂ ಕಲಿಕಾವೆಬ್ ಏಪ್ ಪಿ-ಟೀಚರ್ ವಿನ್ಯಾಸಗಾರ ರಂಜಿತ್ ಎ.ಬಿ. ಅಗಲ್ಪಾಡಿ ಇವರಿಗೆ ಸನ್ಮಾನ ನಡೆಯಿತು. ಸ್ಕೌಟ್ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿ ವೇದಾಂತ್ ಆರ್.ಪಿ.ಪದ್ಮಾರು, ಬಿಎಡ್‍ನಲ್ಲಿ ದ್ವಿತೀಯ ರ್ಯಾಂಕ್ ವಿಜೇತೆ ಕು. ಶೋಭಿತಾ ಇವರಿಗೆ ಅಭಿನಂದನೆ ನಡೆಯಿತು. ಅಚ್ಚುತ ಮಾಸ್ತರ್ ಸ್ವಾಗತಿಸಿ ,ಉದಯ ಕುಮಾರ್ ವಂದಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಯುವ ವಿಭಾಗದ ಪಾತ್ರೆ ಸಮರ್ಪಣೆ, ಮಧ್ಯಾಹ್ನ  ಮಹಾಪೂಜೆ, ಅನ್ನದಾನ ನಡೆಯಿತು. ಮಧ್ಯಾಹ್ನ ಪಾಂಚಜನ್ಯ ಬಾಲಗೋಕುಲ ಅಗಲ್ಪಾಡಿ ಜಯನಗರ ಇವರಿಂದ ಕುಣಿತ ಭಜನೆ, ಗಾನಭೂಷÀಣ ಮುರಳೀಮಾಧವ ಪೆರಿಂಜೆ ಇವರ ನಿರ್ದೇಶನದಲ್ಲಿ ಶ್ರುತಿಲಯ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತಾರ್ಚನೆ, ಪಾಂಚಜನ್ಯ ಬಾಲಗೋಕುಲದ ವಿದ್ಯಾರ್ಥಿಗಳಿಂದ ಕಿರುನಾಟಕ, ನಮಸ್ತೆ ಇಂಡಿಯಾ ಬೆಂಗಳೂರು ಇವರಿಂದ ಪೌರಾಣಿಕ ರಸಪ್ರಶ್ನೆ, ಸಂಜೆ ವಿವಿಧ ಭಜನಾ ಸಂಘಗಳಿಂದ ಭಜನೆ, ರಾತ್ರಿ ಮಹಾಪೂಜೆ, ಶಿವಶೈಲಂ ವಿದ್ಯಾಗಿರಿ ಇವರಿಂದ ತಿರುವಾದಿರ ಮತ್ತು ವೈವಿಧ್ಯಮಯ ನೃತ್ಯ ಪ್ರಕಾರಗಳು ಪ್ರದರ್ಶನಗೊಂಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries