ಕಾಸರಗೋಡು: ಜಿಲ್ಲಾದ್ಯಂತ ಸೋಮವಾರ ರಆತ್ರಿ ಸಮಾನ್ಯ ಮಳೆಯಾಗಿದ್ದು, ಮುಳ್ಳೇರಿಯ-ಕುಂಬಳೆ ನಡುವೆ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಒಂದಷ್ಟು ಅಡಚಣೆಯುಂಟಾಗಿದೆ. ರಸ್ತೆಯಲ್ಲಿ ಹರಿದುಬಂದ ನೀರು ಬದಿಯಡ್ಕದ ಪ್ರಧಾನ ವೃತ್ತದ ಬಳಿ ದಾಸ್ತಾನುಗೊಂಡಿದ್ದು, ಜನಸಂಚಾರಕ್ಕೆ ಒಂದಷ್ಟು ಅಡಚಣೆಯುಂಟಾಗಿತ್ತು.
ಕುಂಬಳೆಯಿಂದ ಬದಿಯಡ್ಕ ವರೆಗೆ ಡಾಂಬರೀಕರಣ ಕಾರ್ಯ ಬಹುತೇಕ ಪೂರ್ತಿಗೊಂಡಿದ್ದು, ಮುಖ್ಯವೃತ್ತದಿಂದ ಮೇಲಿನ ಪೇಟೆ ವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ಬಿರುಸಿನ ಮಳೆಯಾದಲ್ಲಿ ಪೇಟೆ ಸಂಪೂರ್ಣ ಕೆಸರುಮಯವಾಗುವ ಸಾಧ್ಯತೆಯಿದ್ದು, ಇಲ್ಲಿನ ವ್ಯಾಪಾರಿಗಳಲ್ಲಿ ಆತಂಕ ಎದುರಾಘಿದೆ.
ಫೋಟೋ ಬದಿಯಡ್ಕ ಪೇಟೆಯಲ್ಲಿ ಸಣ್ಣ ಮಳೆಗೆ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ.





