HEALTH TIPS

ಲೈಫ್ ಮಿಷನ್: ಮನೆಗಳ ಕೀಲಿಕೈ ಫಲಾನುಭವಿಗಳಿಗೆ ಹಸ್ತಾಂತರ

 


  

              ಕಾಸರಗೋಡು: ಲೈಫ್ ಮಿಷನ್ ಲಕ್ಷಾಂತರ ಕುಟುಂಬಗಳ ಸ್ವಂತ ಮನೆಯ ಕನಸನ್ನು ನೆನಸಾಗಿಸುವ ಮಹತ್ವದ ಯೋಜನೆಯಾಗಿದೆ ಎಂದು ಶಾಸಕ ಇ. ಚಂದ್ರಶೇಖರನ್ ತಿಳಿಸಿದ್ದಾರೆ. ಅವರು ರಾಜ್ಯ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ 100 ದಿನಗಳ ಕ್ರಿಯಾ ಯೋಜನೆಯನ್ವಯ ಕಾಸರಗೋಡು ಜಿಲ್ಲೆಯಲ್ಲಿ ಲೈಫ್ ಮಿಷನ್ ವತಿಯಿಂದ ನಿರ್ಮಿಸಿದ ಮನೆಗಳ ಕೀಲಿಕೈ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

            ಮನೆಯಿಲ್ಲದೆ ಸಂಕಷ್ಟದಲ್ಲಿರುವ ಜನತೆಗೆ ಲೈಫ್ ಯೋಜನೆ ಹೆಚ್ಚು ಸಹಕಾರಿಯಾಗಿದ್ದು,  ಸಮಾಜದಲ್ಲಿ ಈ ನೆರವು ಅಗತ್ಯವಿರುವ ಜನರಿಗೆ ಸಕಾಲದಲ್ಲಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಕಾಞಂಗಾಡ್ ಅಲಾಮಿಪ್ಪಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ನನ್ನ ಕೇರಳ ಮೇಳದ ವೇದಿಕೆಯಲ್ಲಿ 1147 ಮನೆಗಳನ್ನು ಪೂರ್ಣಗೊಳಿಸುವ ಘೋಷಣೆ ಮಾಡಲಾಯಿತು.

           ಶಾಸಕ ಎಂ.ರಾಜಗೋಪಾಲನ್ ಅವರು ಲೈಫ್ ಮಿಷನ್ ಮನೆಗಳ ಕೀಲಿಕೈಯನ್ನು ಫಲಾನುಭವಿಗಳಿಗೆ ನೀಡಿದರು. ನಗರಸಭೆ ವ್ಯಾಪ್ತಿಯಲ್ಲಿ ಪಿಎಂಎವೈ ಮೂಲಕ ಪೂರ್ಣಗೊಂಡಿರುವ ಮನೆಗಳ ಕೀಲಿಕೈಯನ್ನು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಹಸ್ತಾಂತರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್  ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮ್ಮದ್, ಕಾಞಂಗಾಡ್ ಬ್ಲಾಕ್ ಪಂಚಯಿತಿ ಅಧ್ಯಕ್ಷ ಕೆ.ಮಣಿಕಂಠನ್, ಎಲ್‍ಎಸ್‍ಜಿಡಿ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ ಉಪಸ್ಥಿತರಿದ್ದರು.  . ಲೈಫ್ ಮಿಷನ್ ಜಿಲ್ಲಾ ಸಂಯೋಜಕ ಜೆ.ಅನಿಶ್ ಅಲೈಕಪ್ಪಳ್ಳಿ ವರದಿ ವಾಚನ ಮಾಡಿದರು.ನವಕೇರಳಂ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಸ್ವಾಗತಿಸಿದರು.  ಸ್ಥಳೀಯ ಸ್ವ-ಸರಕಾರ ಇಲಾಖೆಯ ಆಂತರಿಕ ವಿಜಿಲೆನ್ಸ್ ಅಧಿಕಾರಿ ಪಿ.ಜಯನ್ ವಂದಿಸಿದರು.


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries