ಇಂಫಾಲ: 'ಹಿಂಸಾಚಾರದಲ್ಲಿ 60 ಮಂದಿ ಮೃತಪಟ್ಟಿದ್ದು, 231 ಜನರು ಗಾಯಗೊಂಡಿದ್ದಾರೆ. ದೇವಸ್ಥಾನಗಳು, ಚರ್ಚ್‌ಗಳು ಸೇರಿದಂತೆ 1,700 ಮನೆಗಳು ಬೆಂಕಿಗಾಹುತಿಯಾಗಿವೆ' ಎಂದು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ.
0
samarasasudhi
ಮೇ 09, 2023
ಇಂಫಾಲ: 'ಹಿಂಸಾಚಾರದಲ್ಲಿ 60 ಮಂದಿ ಮೃತಪಟ್ಟಿದ್ದು, 231 ಜನರು ಗಾಯಗೊಂಡಿದ್ದಾರೆ. ದೇವಸ್ಥಾನಗಳು, ಚರ್ಚ್‌ಗಳು ಸೇರಿದಂತೆ 1,700 ಮನೆಗಳು ಬೆಂಕಿಗಾಹುತಿಯಾಗಿವೆ' ಎಂದು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೃತರ ಕುಟುಂಬಗಳಿಗೆ ತಲಾ ₹ 5 ಲಕ್ಷ, ತೀವ್ರಗಾಯಗೊಂಡವರಿಗೆ ತಲಾ ₹ 2 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರ ಚಿಕಿತ್ಸೆಗೆ ತಲಾ ₹ 25 ಸಾವಿರ ಪರಿಹಾರ ನೀಡಲು ಸಚಿವ ಸಂಪುಟ ನಿರ್ಧರಿಸಿದೆ' ಎಂದು ತಿಳಿಸಿದರು.
'ಇದು ಆಕಸ್ಮಿಕವಾಗಿ ನಡೆದ ಘಟನೆ. ಶಾಂತಿ ನೆಲೆಸಲು ಜನರು ಸಹಕರಿಸಬೇಕು. ಮನೆ ಕಳೆದುಕೊಂಡ ಕುಟುಂಬಗಳಿಗೆ ₹ 2 ಲಕ್ಷ ಪರಿಹಾರ ನೀಡಲಿದ್ದು, ಸೂರು ನಿರ್ಮಿಸಿಕೊಡಲಾಗುವುದು' ಎಂದು ಭರವಸೆ ನೀಡಿದರು.
ಪೊಲೀಸ್ ಸಿಬ್ಬಂದಿ ಬಳಿಯಿದ್ದ 1,041 ಗನ್‌ಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆ. ಈ ಪೈಕಿ 214 ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ಕೂಡಲೇ ವಾಪಸ್ ನೀಡಬೇಕು. ಇಲ್ಲವಾದರೆ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಸಿದರು.
ಕಿಡಿಗೇಡಿಗಳ ವಿರುದ್ಧ ಒಟ್ಟು 218 ಎಫ್‌ಐಆರ್‌ಗಳು ದಾಖಲಾಗಿವೆ.