ಕಾಸರಗೋಡು: ಕೇರಳವನ್ನು ಆಯುರ್ವೇದದ ಹಬ್ ಆಗಿ ಬದಲಾಯಿಸುವುದಾಗಿ ಕೇರಳ ಆರೋಗ್ಯ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ವೇಣಾ ಜಾರ್ಜ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲೆಯ ಕಳ್ನಾಡಿನಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ, ಖಾಸಗಿ ವಲಯದ ಆಯುರ್ವೇದ ವೈದ್ಯರ ಸಾರ್ವಜನಿಕ ಸಂಘಟನೆ ಆಯುರ್ವೇದಿಕ್ ಮೆಡಿಕಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎಎಂಎಐ)ದ 44ನೇ ರಾಜ್ಯ ಕೌನ್ಸಿಲ್ ಸಮಾವೇಶದ ಸಮಾರೋಪ ಸಮಾರಂಭವನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಘಟನೆ ರಾಜ್ಯಾಧ್ಯಕ್ಷ ಡಾ.ಕೆ.ಡಿ. ಲೀನಾ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಇ. ಚಂದ್ರಶೇಖರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಕೆ. ಅಜಿತಕುಮಾರಿ, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಡಾ.ಡಿ. ರಾಮನಾಥನ್, ಡಾ.ಎಸ್. ಗೋಪಕುಮಾರಿ, ಡಾ.ವಿ.ಜೆ. ಸೆಬಾ, ರಾಜ್ಯ ಮಹಿಳಾ ಸಂಘದ ಅಧ್ಯಕ್ಷೆ ಡಾ: ಎಂ.ಎ. ಅಸ್ಮಾಬಿ, ಸ್ವಾಗತ ಸಂಘದ ಪ್ರಧಾನ ಸಂಚಾಲಕ ಡಾ.ರಂಜಿತ್ ಕೆ.ಆರ್ ಉಪಸ್ಥೀತರಿದ್ದರು.
ಈ ಸಂದರ್ಭ ಭಾರತೀಯ ಆಯುರ್ವೇದಿಕ್ ಮೆಡಿಕಲ್ ಅಸೋಸಿಯೇಷನ್ ರಾಜ್ಯ ಮಟ್ಟದಲ್ಲಿ ವಾರ್ಷಿಕವಾಗಿ ನೀಡುವ ಮಾಧ್ಯಮ ಪ್ರಶಸ್ತಿಯನ್ನು ಕೇರಳ ಕೌಮುದಿ ಕೊಚ್ಚಿ ಆವೃತ್ತಿಯ ವಿಶೇಷ ವರದಿಗಾರ ಎಂ.ಎಸ್.ಸಜೀವನ್ ಅವರಿಗೆ ಪ್ರದಾನ ಮಾಡಲಾಯಿತು. ಆಯುರ್ವೇದ ವಿಜ್ಞಾನದ ವಿಶಿಷ್ಟತೆ, ವಿಜ್ಞಾನ ಮತ್ತು ಪ್ರಯೋಜನಗಳನ್ನು ಜನರಿಗೆ ತಲುಪಿಸುವ ರೀತಿಯಲ್ಲಿ ಪತ್ರಿಕೆ, ದೂರದರ್ಶನ ಮತ್ತು ರೇಡಿಯೋ ಮಾಧ್ಯಮಗಳ ಮೂಲಕ ಆಯುರ್ವೇದಕ್ಕೆ ಸಂಬಂಧಿಸಿದ ಮಹತ್ವದ ಸುದ್ದಿಪ್ರಕಟಿಸಿರುವುದಕ್ಕೆ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಡಾ. ಸಿ.ಕೆ. ದಿವಾಕರನ್ ಅವರ ಚಿಕಿತ್ಸೆಗಳ ಸಂಗ್ರಹ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಉತ್ತಮ ಆಯುರ್ವೇದ ಕಾಲೇಜು ನಿಯತಕಾಲಿಕ ಪ್ರಶಸ್ತಿಯನ್ನು ಅಂಗೇಲಿಲ್ ಆಯುರ್ವೇದ ಕಾಲೇಜಿಗೆ ನೀಡಲಾಯಿತು.
ಈ ಸಂದರ್ಭ ನೂತನ ಪದಧಿಕಾರಿಗಳ ಆಯ್ಕೆ ನಡೆಯಿತು. ಡಾ. ಸಿ.ಡಿ. ಲೀನಾ ತಿರುವನಂತಪುರ, ಅಧ್ಯಕ್ಷೆ, ಡಾ.ಕೆ.ಎಸ್ ವಿಷ್ಣುನಂಬುತಿರಿ ಉಪಾಧ್ಯಕ್ಷ, ಡಾ.ಕೆ. ಅಜಿತ್ ಕುಮಾರ್ ಕಣ್ಣೂರು ಪ್ರಧಾನ ಕಾರ್ಯದರ್ಶಿ, ಡಾ.ಸಿರಿ ಸೂರಜ್, ಡಾ. ಶಬೀಲ್ ಇಬ್ರಾಹಿಂ, ಡಾ. ಬಿ.ರಾಜೇಶ್ ಅವರು ಕಾರ್ಯದರ್ಶಿಗಳು, ಡಾ. ಕೆ ಎಂ ಮುಹಮ್ಮದ್ ರಾಝಿ ವಯನಾಡು ಕೋಶಾಧಿಕಾರಿ, ಡಾ. ಎಂ.ಎ. ಅಸ್ಮಾಬಿ ಮಹಿಳಾ ಘಟಕ ಅಧ್ಯಕ್ಷೆ ಮತ್ತು ಡಾ. ಟಿಂಟು ಎಲಿಜಬೆತ್ ಟೋಮಿ ಅವರನ್ನು ಮಹಿಳಾ ಘಟಕ ಕನ್ವೀನರ್ ಆಗಿ ಆಯ್ಕೆ ಮಾಡಲಾಯಿತು.





